ಸರಕಾರಿ ಯೋಜನೆಗಳ ಕುರಿತು ಜಾಗೃತಿ ಅಗತ್ಯ: ಗೀತಾ
ಬೆಂಗಳೂರು, ಸೆ.24: ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸರಕಾರಿ ಸೌಲಭ್ಯಗಳ ಕುರಿತು ಮಾಹಿತಿ ನೀಡುವುದು ತೀರ ಅಗತ್ಯವಿದೆ ಎಂದು ಸಹಾಯ ಸಿಂಗಲ್ ವಿಂಡೋ ಸಂಸೆಯ ಸಂಘಟಕಿ ಗೀತಾ ತಿಳಿಸಿದ್ದಾರೆ.
ಸಹಾಯ ಸಿಂಗಲ್ ವಿಂಡೋ ಸಂಸ್ಥೆ ನಗರದ ಜೈನ್ ಕಾಲೇಜಿನಲ್ಲಿ ಆಯೋಜಿಸಿದ್ದ ಮಾಧ್ಯಮಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಬಿಎಂಪಿ ಸೇರಿದಂತೆ ಸರಕಾರದ ಎಲ್ಲ ಇಲಾಖೆಗಳಲ್ಲೂ ಬಡವರಿಗಾಗಿ ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಆದರೆ, ಮಾಹಿತಿಯ ಕೊರತೆಯಿಂದಾಗಿ ಸೌಲಭ್ಯಗಳು ತಲುಪುತ್ತಿಲ್ಲ ಎಂದು ವಿಷಾದಿಸಿದರು.
ಆಶಾ ಕಾರ್ಯಕರ್ತೆ ರೂಪಾ ಮಾತನಾಡಿ, ಕೊಳಚೆ ಪ್ರದೇಶದಲ್ಲಿರುವ ಗರ್ಭಿಣಿ ಮಹಿಳೆಯರಿಗೆ ಆರೋಗ್ಯ ಸಂಬಂಧಿಸಿ ಹಲವಾರು ಸಮಸ್ಯೆಗಳಿರುತ್ತವೆ. ಅವರಿಗೆ ಸಹಾಯ ಸಿಂಗಲ್ ವಿಂಡೋ ಸಹಯೋಗದೊಂದಿಗೆ ಆರೋಗ್ಯ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.
ಈ ವೇಳೆ ಸಹಾಯ ಸಿಂಗಲ್ ವಿಂಡೋದ ಕಾರ್ಯಕರ್ತರಾದ ಗೀತಾ, ಚಿತ್ರಾ, ರೇಣುಕಾ ಉಪಸ್ಥಿತರಿದ್ದರು.
Next Story





