ಆಧಾರ್ ಕಾರ್ಡ್‌ಗಳಿಗೆ ಬೆಂಕಿ: ದೂರು ದಾಖಲು
ಬೆಂಗಳೂರು, ಸೆ.24: ಐನೂರಕ್ಕೂ ಹೆಚ್ಚು ಆಧಾರ್ ಕಾರ್ಡ್‌ಗಳಿಗೆ ಬೆಂಕಿ ಹಚ್ಚಿರುವ ಘಟನೆ ಬಿಟಿಎಂ ಮೈಕೋ ಲೇಔಟ್‌ನ ಎರಡನೆ ಹಂತದಲ್ಲಿ ನಡೆದಿದೆ.
ಬಿಬಿಎಂಪಿಗೆ ಸೇರಿದ ಜಾಗದಲ್ಲಿ ಈ ಘಟನೆ ನಡೆದಿದ್ದು, ಬೆಂಕಿ ಇಟ್ಟವರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಈ ಎಲ್ಲ ಆಧಾರ್ ಕಾರ್ಡ್‌ಗಳಿಗೂ ಲ್ಯಾಮಿನೇಷನ್ ಮಾಡಲಾಗಿದ್ದು, ಪೊಲೀಸರು ಇದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಮೈಕೋ ಲೇಔಟ್ ಠಾಣಾ ಪೊಲೀಸರುವ ಕ್ರಮ ಕೈಗೊಂಡಿದ್ದಾರೆ.
Next Story





