ಡಾ. ಪಿ.ಜಿ.ಭಟ್
ಬಂಟ್ವಾಳ, ಸೆ. 24: ಸುಮಾರು 40 ವರ್ಷಗಳಿಗಿಂತಲೂ ಅಧಿಕ ಕಾಲ ಬಿ.ಸಿ.ರೋಡಿನಲ್ಲಿ ವೈದ್ಯವೃತ್ತಿ ನಡೆಸಿದ್ದ ವೈದ್ಯ ಡಾ. ಪಿ.ಜಿ. ಭಟ್ ಅಸೌಖ್ಯದಿಂದ ಮಂಗಳೂರು ಆಸ್ಪತ್ರೆಯಲ್ಲಿ ರವಿವಾರ ನಿಧನರಾದರು.
ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಅಭಿಮಾನಿಗಳು, ಸ್ನೇಹಿತರನ್ನು ಅಗಲಿದ್ದಾರೆ.
ಎಂ.ಬಿ.ಬಿ.ಎಸ್. ಪದವಿ ಪಡೆದ ಬಳಿಕ ಬಿ.ಸಿ.ರೋಡಿನಲ್ಲಿ ಈಗ ಫ್ಲೈ ಓವರ್ ಇರುವ ಜಾಗದಲ್ಲಿ ಸುಮಾರು 40 ವರ್ಷಗಳ ಕಾಲ ವೈದ್ಯವೃತ್ತಿ ನಡೆಸಿದ್ದ ಡಾ. ಭಟ್, ವಿರಳ ಸಂಖ್ಯೆಯಲ್ಲಿ ವೈದ್ಯರಿದ್ದ ಸಂದರ್ಭ ಬಿ.ಸಿ.ರೋಡ್, ಬಂಟ್ವಾಳ ಸಹಿತ ಸುತ್ತಮುತ್ತಲಿನ ಪರಿಸರದ ಜನರ ಮನೆ ವೈದ್ಯರೂ ಆಗಿದ್ದರು.
Next Story