ಗೌರಿ ಲಂಕೇಶ್ ಧ್ವನಿಯಿಲ್ಲದವರ ಧ್ವನಿಯಾಗಿದ್ದರು: ಎ.ಕೆ.ಕುಕ್ಕಿಲ

ಉಳ್ಳಾಲ, ಸೆ. 24: ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ ಉಳ್ಳಾಲ ಘಟಕದ ವತಿಯಿಂದ ಗೌರಿ ಲಂಕೇಶ್ ಜೀವನ ಮತ್ತು ಹೋರಾಟ ಎಂಬ ವಿಷಯದಲ್ಲಿ ವಿಚಾರಗೋಷ್ಠಿ ಯನ್ನು ಹಮ್ಮಿಕೊಳ್ಳಲಾಯಿತು.
ಮುಖ್ಯಅತಿಥಿಯಾಗಿ ಆಗಮಿಸಿದ ಸನ್ಮಾರ್ಗ ವಾರ ಪತ್ರಿಕೆಯ ಸಂಪಾದಕರಾದ ಎ.ಕೆ.ಕುಕ್ಕಿಲ ಮಾತನಾಡಿ "ಗೌರಿ ಲಂಕೇಶ್ ಅವರು ಧ್ವನಿಯಿಲ್ಲದವರ ಧ್ವನಿಯಾಗಿದ್ದರು ಸಮಾಜದಲ್ಲಿ ನಡೆಯುತ್ತಿರುವ ಎಲ್ಲಾ ರೀತಿಯ ಅನ್ಯಾಯದ ವಿರುದ್ಧ ಲೇಖನಿಯೆತ್ತಿದವರು ಶೋಷಿತ ವರ್ಗಗಳನ್ನು ಮುಖ್ಯ ವಾಹಿನಿಗೆ ತರುವಲ್ಲಿ ನಿರಂತರ ಶ್ರಮವಹಿಸಿದ್ದರು. ತನ್ನ ಸಿದ್ಧಾಂತಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಧೀರ ದಿಟ್ಟ ಮಹಿಳೆ ಅವರ ಚಿಂತನೆಗಳು ನಮ್ಮ ಮುಂದಿನ ಹೋರಾಟಕ್ಕೆ ಸ್ಪೂರ್ತಿಯಾಗಬೇಕು" ಎಂದರು. ನಂತರ ಮಾತನಾಡಿದ ಎಸ್ ಐ ಒ ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಇರ್ಶಾದ್ ವೇಣೂರ್ "ಸಮಾಜದಲ್ಲಿ ಅಸಮಾನತೆ ತಲೆದೂರಿದೆ ಸತ್ಯಕ್ಕಾಗಿ ಧ್ವನಿಯೆತ್ತಿದವರನ್ನು ಕೋಲ್ಲಲಾಗುತ್ತದೆ ಪಾನ್ಸರೆ, ದಾಬೋಲ್ಕರ್ , ಕಲ್ಬುರ್ಗಿ ಗೌರಿ ಒಬ್ಬರ ಹಿಂದೆ ಒಬ್ಬರಂತೆ ಕೋಲ್ಲುತ್ತಿದ್ದಾರೆ. ಇನ್ನು ಯುವಕರು ಜಾಗರೂಕರಾಗಬೇಕು. ದೇಶದೊಳಗಿನ ದುಷ್ಟ ಶಕ್ತಿಗಳ ವಿರುದ್ಧ ಹೋರಾಡಬೇಕು ಎಂದರು.
ಉಳ್ಳಾಲ ಘಟಕದ ಕಾರ್ಯದರ್ಶಿ ಸಯ್ಯಾಫ್ ಕಲ್ಲಾಪು ತಮ್ಮ ಅಭಿಪ್ರಾಯಗಳನ್ನು ಹಂಚಿದರು. ಉಳ್ಳಾಲ ಘಟಕದ ಅಧ್ಯಕ್ಷ ಅಶೀರುದ್ದೀನ್ ಆಲಿಯಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು ಶಾಕಿಬ್ ಕಲ್ಲಾಪ್ ಕಿರಾಅತ್ ಪಠಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಝಾಮ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.





