ಮಂಗಳೂರು, ಸೆ. 24: ಮಂಗಳೂರು ತಾಲೂಕಿನ ಪಾವೂರು ವ್ಯಾಪ್ತಿಯ ಉಳಿಯ ದ್ವೀಪದಲ್ಲಿ ಅಭಿವೃದ್ದಿ ಕಾರ್ಯಕ್ರಮಗಳ ಅನುಷ್ಠಾನದ ಕುರಿತು ಪ್ರಗತಿ ಪರಿಶೀಲನಾ ಸಭೆಯನ್ನು ದ.ಕ. ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಂ.ಆರ್. ರವಿ ಅಧ್ಯಕ್ಷತೆಯಲ್ಲಿ ಸೆ.26 ರಂದು ಬೆಳಗ್ಗೆ 11 ಗಂಟೆಗೆ ಉಳಿಯ ದ್ವೀಪದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.