ಸೊರಬ: ಶ್ರೀರಂಗನಾಥ ವಿವಿಧೋದ್ದೇಶ ಸಹಕಾರ ಸಂಘದ ಮಹಾ ಸಭೆ

ಸೊರಬ, ಸೆ.24: ಶತಮಾನ ಕಂಡಿರುವ ಪಟ್ಟಣದ ಶ್ರೀರಂಗನಾಥ ವಿವಿಧೋದ್ದೇಶ ಸಹಕಾರ ಸಂಘ ಸುಧಾರಣೆಯ ಹಂತದಲ್ಲಿದ್ದು ಹೆಚ್ಚು ಲಾಭಗಳಿಸುವ ಉದ್ದೇಶದಿಂದ ವಿವಿಧಯೋಜನೆಗಳನ್ನು ಕಾರ್ಯರೂಪಕ್ಕೆತರಲು ಚಿಂತನೆ ನಡೆಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಬಂದಗಿ ಬಸವರಾಜ ಶೇಟ್ ತಿಳಿಸಿದರು.
ರವಿವಾರ ಪಟ್ಟಣದ ಶ್ರೀರಂಗನಾಥ ವಿವಿಧೋದ್ದೇಶ ಸಹಕಾರ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿ, ಸಂಸ್ಥೆಯು ಈಗಾಗಲೇ ಬ್ಯಾಂಕ್‍ಆಗಿ ಪರಿವರ್ತನೆಯಾಗಬೇಕಾಗಿತ್ತು, ಕಾರಣಾಂತರದಿಂದ ಸಾಧ್ಯವಾಗದಿರುವುದು ಬೇಸರದ ಸಂಗತಿ. ಪ್ರಸ್ತುತ ಸಂಘವು ಸುಧಾರಣೆಯ ಹಂತದಲ್ಲಿದ್ದು ಇನ್ನೂ ಉತ್ತಮ ಸ್ಥಿತಿಗೆ ಕೊಂಡೊಯ್ಯಲು ಎಲ್ಲರ ಸಲಹೆ ಮತ್ತು ಸಹಕಾರ ಅವಶ್ಯಕವಾಗಿದೆ ಎಂದರು.
ಈ ಹಿಂದೆ ಶೇರುದಾರರಿಗೆ ರೂ10 ಸಾವಿರ ರೂ. ವರೆಗೆ ನೀಡುತ್ತಿದ್ದ ಸಾಲವನ್ನು 25 ಸಾವಿರ ರೂ.ನೀಡಲು ನಿರ್ಧರಿಸಲಾಗಿತ್ತು. ಆದರೆ ಆಧಾರ ಸಹಿತ ರೂ50ಸಾವಿರವರೆಗೆ ಸಾಲ ನೀಡುವಂತೆ ಸದಸ್ಯರಿಂದ ಸಲಹೆಗಳು ಬಂದಿವೆ ಅದನ್ನು ಸಮಿತಿಯ ಮುಂದಿಟ್ಟು ಪರಿಶೀಲಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಅಕ್ಟೋಬರ್ 14ರಂದು ಸಹಕಾರ ಸಂಘದ ಶತಮಾನೋತ್ಸವ ಕಾರ್ಯಕ್ರಮ ನಿಗದಿಯಾಗಿದ್ದು, ಅಂದಿನ ಕಾರ್ಯಕ್ರಮಕ್ಕೆ ಕಂದಾಯ ಸಜಿವ ಕಾಗೋಡು ತಿಮ್ಮಪ್ಪ ಹಾಗೂ ಶಾಸಕ ಮಧುಬಂಗಾರಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಉಪಾಧ್ಯಕ್ಷ ದತ್ತಾತ್ತ್ರೇಯಮೂರ್ತಿ ಪುರಾಣಿಕ್, ನಿರ್ದೇಶಕರಾದ ಸಿ.ರಾಜಶೇಖರ್, ಮಧುರಾಯ್.ಜಿ.ಶೇಟ್, ಮಹೇಶ ಕಾಳೆ, ನಾಗರಾಜ್.ಜೆ.ಎಸ್., ಶಂಕರ್ ಡಿ.ಎಸ್., ಇಎಚ್.ಮಂಜುನಾಥ, ಕೆ.ಪಿ.ಶ್ರೀಧರ್, ಭಾರತಿ ಶೆಣೈ, ರೇಣುಕಾ ಮಾರುತಿ, ಕಾರ್ಯದರ್ಶಿ ಕೆ.ರಾಜಶೇಖರಪ್ಪ, ಪ್ರಮುಖರಾದ ಪ್ರಭಾಕರ ರಾಯ್ಕರ್, ದಿನಕರ್ ಭಟ್ ಭಾವೆ, ಟಿ.ಆರ್.ಸುರೇಶ್, ಬಂಗಾರಸ್ವಾಮಿ ಕಂತನಹಳ್ಳಿ, ಎಲ್.ಗಿರೀಶ್, ಡಾ.ಅ.ಕೋ.ವಿರೂಪಾಕ್ಷಪ್ಪ, ಆರ್.ಮನ್‍ವೇಲ್, ಅನ್ಸರ್ ಸೊಪ್ಪಿನಕೇರಿ, ಸಯ್ಯದ್ ಮಹಬೂಬ್ ಮತ್ತಿತರರಿದ್ದರು.







