ಡಾರ್ಜೆಲಿಂಗ್ ನಲ್ಲಿ ಮತ್ತೆ ಹಿಂಸಾಚಾರ

ಡಾರ್ಜೆಲಿಂಗ್, ಸೆ. 23: ಪಶ್ಚಿಮಬಂಗಾಳದ ಡಾರ್ಜೆಲಿಂಗ್ ನಲ್ಲಿ ರವಿವಾರ ಮತ್ತೆ ಹಿಂಸಾಚಾರ ಆರಂಭವಾಗಿದೆ. ಜಿಲ್ಲೆಯ ಲೆಬಾಂಗ್‌ನತ್ತ ತೆರಳುತ್ತಿದ್ದ ವಾಹನವೊಂದಕ್ಕೆ ಗೋರ್ಖಾ ಜನಮುಕ್ತಿ ಮೋರ್ಚಾದ ಕಾರ್ಯಕರ್ತರು ಬೆಂಕಿ ಹಚ್ಚಿದ್ದಾರೆ.
ರವಿವಾರ ಬೆಳಗ್ಗೆ ಡಾರ್ಜೆಲಿಂಗ್ ನಿಂದ ಲೆಬಾಂಗ್‌ನತ್ತ ತೆರಳುತ್ತಿದ್ದ ವಾಹನವನ್ನು ಜಿಜೆಎಂ ಕಾರ್ಯಕರ್ತರು ಧ್ವಂಸಗೊಳಿಸಿದರು ಹಾಗೂ ಬೆಂಕಿ ಹಚ್ಚಿದರು. ಈ ಘಟನೆಯಲ್ಲಿ ಓರ್ವ ಗಾಯಗೊಂಡಿದ್ದಾನೆ ಎಂದು ಡಾರ್ಜಿಲಿಂಗ್‌ನ ಪೊಲೀಸ್ ಅಧೀಕ್ಷಕ ಅಖಿಲೇಶ್ ಕುಮಾರ್ ಚತುರ್ವೇದಿ ತಿಳಿಸಿದ್ದಾರೆ.
Next Story





