Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಭಟ್ಕಳ: ಸಂಘಪರಿವಾರದಿಂದ ಕೋಮು ಪ್ರಚೋದನೆ;...

ಭಟ್ಕಳ: ಸಂಘಪರಿವಾರದಿಂದ ಕೋಮು ಪ್ರಚೋದನೆ; ತಂಝೀಮ್ ಆರೋಪ

ವಾರ್ತಾಭಾರತಿವಾರ್ತಾಭಾರತಿ25 Sept 2017 7:02 PM IST
share
ಭಟ್ಕಳ: ಸಂಘಪರಿವಾರದಿಂದ ಕೋಮು ಪ್ರಚೋದನೆ; ತಂಝೀಮ್ ಆರೋಪ

ಭಟ್ಕಳ,ಸೆ.25: ಪುರಸಭೆ ಅಂಗಡಿ ಮಳಿಗೆ ಕಬ್ಜಾ ವಿಚಾರದಲ್ಲಿ ಮುಸ್ಲಿಮರ ಹಾಗೂ ತಂಝೀಮ್ ಸಂಸ್ಥೆಯ ವಿರುದ್ಧ ಹಿಂದೂ ಬಾಂಧವರಲ್ಲಿ ಕೋಮುದ್ವೇಶದ ಭಾವನೆ ಉಂಟು ಮಾಡಿ ರಾಜಕೀಯ ಲಾಭ ಗಳಿಸಲು ಸಂಘಪರಿವಾರ ಹುನ್ನಾರ ನಡೆಸಿದೆ ಎಂದು ಮಜ್ಲಿಸೆ ಇಸ್ಲಾಹ್ ತಂಝಿಮ್ ಸಂಸ್ಥೆ ಆರೋಪಿಸಿದೆ. 

ಸೋಮವಾರ ತಂಝೀಮ್ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅಧ್ಯಕ್ಷ ಮುಝಮ್ಮಿಲ್ ಕಾಝೀಯಾ, ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಖರೂರಿ,  ಪುರಸಭೆಯ ಅಂಗಡಿಗಳ ಸಮಸ್ಯೆಯನ್ನು ನೆಪವಾಗಿಟ್ಟು ಕೊಂಡು ಸಂಘಪರಿವಾರದ  ನಾಯಕರಿಂದ ಭಟ್ಕಳದಲ್ಲಿ ಹಿಂದು ಮುಸ್ಲಿಮರ ನಡುವೆ ಕೋಮು ಭಾವನೆಯನ್ನು ಕೆರಳಿಸುವ ಪ್ರಯತ್ನ ಮಾಡುತ್ತಿರುವುದನ್ನು ಮಜ್ಲಿಸೆ ಇಸ್ಲಾಹೊ ತನ್‍ಝೀಮ್ ತೀವ್ರವಾಗಿ ಖಂಡಿಸುತ್ತದೆ. ಪುರಸಭೆಯ ಆಡಳಿತಾತ್ಮಕ ಹಾಗು ಕಾನೂನಿಗೆ ಸಂಬಂಧ ಪಟ್ಟ ಸಮಸ್ಯೆಯಲ್ಲಿ ಉದ್ದೇಶಪೂರ್ವಕವಾಗಿ ಮುಸ್ಲಿಮರು ಹಾಗು ಮಜ್ಲಿಸೆ ಇಸ್ಲಾಹೊ ತಂಝೀಮ್ ಸಂಸ್ಥೆಯನ್ನು ಎಳೆದು ತರುವುದು ಹಾಗು ಇದರೊಂದಿಗೆ ಮುಸ್ಲಿಮರ ಧಾರ್ಮಿಕ ಪಾಠಶಾಲೆಗಳಾದ ಮದ್ರಸಗಳನ್ನು ಬಾಂಬ್ ಉತ್ಪಾದಿಸುವ ಕಾರ್ಖಾನೆಗಳೆಂದು ಸಾರುವುದು, ತಂಝೀಮ್ ಸಂಸ್ಥೆಯನ್ನು ಗುರಿಯಾಗಿಸುವುದು ಸಂಘ ಪರಿವಾರದ ಮುಸ್ಲಿಮ್ ವಿರೋಧಿ ನಿಲುವಿಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದ್ದಾರೆ.

ಚುನಾವಣೆ ಸಮೀಪಿಸುತ್ತಿದ್ದು ಅಧಿಕಾರದ ದುರಾಸೆಗಾಗಿ ಬಿ.ಜೆ.ಪಿ., ಮತ್ತು ಸಂಘ ಪರಿವಾರಗಳು ತಮ್ಮೆಲ್ಲ ಶಕ್ತಿಯನ್ನು ಒಗ್ಗೂಡಿಸಿ ಕರಾವಳಿ ಪ್ರದೇಶದಲ್ಲಿ ಶಾಂತಿಯನ್ನು ಕದಡಿ ಪರಸ್ಪರರಲ್ಲಿ ವಿಷಬೀಜ ಬಿತ್ತಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಹುನ್ನಾರವಾಗಿರುತ್ತದೆ. ಬಿ.ಜೆ.ಪಿ. ನಾಯಕರುಗಳ ಬಹಿರಂಗ ಹೇಳಿಕೆಗಳು ಇದಕ್ಕೆ ಪುಷ್ಠಿ ನೀಡುತ್ತಿವೆ. ಬಿ.ಜಿ.ಪಿ. ಯ ನಾಯಕರುಗಳು ಬಹುಸಂಖ್ಯಾತ ಹಿಂದು ಬಾಂಧವರನ್ನು ಉದ್ದೇಶಿಸಿ  “ಭಟ್ಕಳದಲ್ಲಿ ಹಿಂದುಗಳ ಮೇಲೆ ದೌರ್ಜನ್ಯವೆಸಗಲಾಗುತ್ತಿದೆ, ಅವರ ಜೀವನವನ್ನು ಸಂಕಷ್ಟಕ್ಕೀಡು ಮಾಡಲಾಗುತ್ತಿದೆ ಹಾಗು ಅವರನ್ನು ಭಟ್ಕಳದಿಂದ ಓಡಿಸುವ ಸಂಚು ನಡೆಯುತ್ತಿದೆ” ಎನ್ನುವ ಉದ್ರೇಕಕಾರಿ ಹೇಳಿಕೆಗಳಿಂದ ಹಿಂದೂ ಬಾಂಧವರ ಬಾವನೆಗಳನ್ನು ಕೆರಳಿಸಿ ಕೋಮು ಸಂಘರ್ಷಕ್ಕೆ ನಾಂದಿ ಹಾಡುವ ಪ್ರಯತ್ನ ನಡೆಯುತ್ತಿದೆ.ಇದರಿಂದಾಗಿ ಭಟ್ಕಳದ ಹೊರಗೆ ವಾಸಿಸುವ ನೆರೆಕರೆಯವರಿಗೆ ವಿಷೇಶವಾಗಿ ಮುಸ್ಲಿಮೇತರರಿಗೆ ಭಟ್ಕಳದಲ್ಲಿ ಮುಸ್ಲಿಮೇತರರ ಮೇಲೆ ದೌರ್ಜನ್ಯವೆಸಗಲಾಗುತ್ತಿದೆ ಎನ್ನುವ ಸಂದೇಶ ರವಾನೆಯಾಗುತ್ತಿದೆ. 

1993 ರಲ್ಲಿ ಭಟ್ಕಳದಲ್ಲಿ ಕೋಮುಗಲಭೆಯನ್ನು ಸೃಷ್ಟಿಸಿದ್ದು ಈಗ ಮತ್ತೆ ಅದೇ ತಂತ್ರವನ್ನು ಬಳಸಿ ರಾಜಕೀಯ ಲಾಭಗಳಿಸುವ ಹುನ್ನಾರ ನಡೆಸುತ್ತಿದೆ ಎಂದು ತಂಝೀಮ್ ಮುಖಂಡರು ಆರೋಪಿಸಿದರು.  

ಪುರಸಭೆಯ ಅಂಗಡಿಗಳ ಸಮಸ್ಯೆಯು ಅಕ್ಷರಶಃ ಕಾನೂನಿಗೆ ಒಳಪಟ್ಟುದು ಹಾಗು ಆಡಳಿತಾತ್ಮಕ ಸಮಸ್ಯೆಯಾಗಿರುತ್ತದೆ. ಇದನ್ನು ತಂಝೀಮ್ ಹಾಗು ಮುಸ್ಲಿಮರೊಂದಿಗೆ ಜೋಡಿಸುವುದು ಕೇವಲ ಮುಸ್ಲಿಮ್ ವಿರೋಧಿ ನಿಲುವು ಹಾಗು ದುರ್ಬುಧ್ಧಿಯಿಂದ ಕೂಡಿದ್ದಾಗಿರುತ್ತದೆ ವಿನಹ ಬೇರೇನೂ ಅಲ್ಲ. ಪ್ರಸ್ತುತ ಅಂಗಡಿಕಾರರಲ್ಲಿ ಮುಸ್ಲಿಮರೂ ಹಿಂದುಗಳೂ ಎರಡೂ ವರ್ಗದ ಜನರಿರುತ್ತಾರೆ. ರಾಮಚಂದ್ರ ನಾಯ್ಕರ ಮರಣದ ಬಗ್ಗೆ ನಮಗೆಲ್ಲರಿಗೂ ದುಖಃವಿದೆ. ಇದು ಒಂದು ದೊಡ್ಡ ದುರಂತವಾಗಿದೆ. ನಮ್ಮ ಅನುಕಂಪ ಅವರ ಕುಟುಂಬದೊಂದಿಗೆ ಎಂದು ಅಧ್ಯಕ್ಷ ಮುಜಮ್ಮಿಲ್ಲ ಕಾಝಿಯಾ ತಿಳಿಸಿದರು. 

ಈ ಸಂದರ್ಭದಲ್ಲಿ ಕಾರ್ಯದರ್ಶಿ ಸೈಯ್ಯದ್ ಯಾಸಿರ್ ನದ್ವಿ ಬರ್ಮಾವರ್, ಡಿ.ಎಫ್ ಸಿದ್ದೀಖ್, ಸನಾವುಲ್ಲಾ ಗವಾಯಿ, ಉಪಾಧ್ಯಕ್ಷ ಎಸ್.ಎಂ.ಸೈಯ್ಯದ್ ಅಬುಲ್ ಖಾಸಿಮ್, ಸೈಯ್ಯದ್ ಮುಹಿದ್ದೀನ್ ಬರ್ಮಾವರ ಮತ್ತಿತರರು ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X