ಬ್ಯಾರಿ ಭಾಷಾ ದಿನ ಆಚರಿಸಲು ಮನವಿ
ಮಂಗಳೂರು, ಸೆ.25: ರಾಜ್ಯ ಸರಕಾರವು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯನ್ನು ಸ್ಥಾಪಿಸಿದ ನೆನಪಿನಲ್ಲಿ ಅಕಾಡಮಿಯ ವತಿಯಿಂದ ಕಳೆದ ಮೂರು ವರ್ಷದಿಂದ ಅಕ್ಟೋಬರ್ 3ರಂದು ಬ್ಯಾರಿ ಭಾಷಾ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ವಿಶ್ವದೆಲ್ಲೆಡೆ ಬ್ಯಾರಿ ಭಾಷೆ ಮಾತನಾಡುವ ಸುಮಾರು 20 ಲಕ್ಷಕ್ಕೂ ಮೇಲ್ಪಟ್ಟ ಜನರಿದ್ದು, ಬ್ಯಾರಿ ಭಾಷೆಯ ಮೇಲೆ ಸಾರ್ವಜನಿಕರಲ್ಲಿ ಮತ್ತು ಸಮುದಾಯದವರಲ್ಲಿ ಅಭಿಮಾನ ಮೂಡಿಸುವ ಸಲುವಾಗಿ ಮತ್ತು ಬ್ಯಾರಿ ಭಾಷೆಯನ್ನು ಸಾಹಿತ್ಯ ಭಾಷೆಯಾಗಿ ಬೆಳೆಸಲು ಸಂಘ-ಸಂಸ್ಥೆಗಳು ದೇಶ-ದೇಶಗಳಲ್ಲಿ ಅಂದು ಬ್ಯಾರಿ ಭಾಷಾ ದಿನಾಚರಣೆ ಮತ್ತು ಅಕ್ಟೋಬರ್‌ನಲ್ಲಿ ಬ್ಯಾರಿ ಭಾಷಾ ಕಾರ್ಯಕ್ರಮಗಳನ್ನು ನಡೆಸಲು ಅಕಾಡಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಮನವಿ ಮಾಡಿದ್ದಾರೆ.
Next Story





