ಹಂತಕರು,ಅತ್ಯಾಚಾರಿಗಳು ಸೇರಿದಂತೆ 24 ಬಾಲಾಪರಾಧಿಗಳು ಪರಾರಿ

ಮುಂಗೇರ್(ಬಿಹಾರ),ಸೆ.25: ಹಂತಕರು ಮತ್ತು ಅತ್ಯಾಚಾರಿಗಳು ಸೇರಿದಂತೆ ಹಲವಾರು ಬಾಲಾಪರಾಧಿಗಳು ಮತ್ತು ಬಾಲಾರೋಪಿಗಳು ರವಿವಾರ ರಾತ್ರಿ ಇಲ್ಲಿಯ ರಿಮಾಂಡ್ ಹೋಮ್‌ನಿಂದ ಸಾಮೂಹಿಕವಾಗಿ ಪರಾರಿಯಾಗಿದ್ದಾರೆ.
ರಿಮಾಂಡ್ ಹೋಮ್‌ನಲ್ಲಿ ಒಟ್ಟು 84 ಬಾಲಕರಿದ್ದು, ಈ ಪೈಕಿ 34 ಬಾಲಕರು ಕಿಟಕಿ ಮತು ಪ್ರವೇಶದ್ವಾರದ ಸರಳುಗಳನ್ನು ತುಂಡರಿಸಿ ಪರಾರಿಯಾಗಿದ್ದರು. ಈ ಪೈಕಿ 12 ಬಾಲಕರು ಗಂಟೆಗಳ ಬಳಿಕ ರಿಮಾಂಡ್ ಹೋಮ್‌ಗೆ ಮರಳಿದ್ದಾರೆ ಎಂದು ಪೊಲೀಸರು ಸೋಮವಾರ ಇಲ್ಲಿ ತಿಳಿಸಿದರು.
ಈ ಪೈಕಿ ಹೆಚ್ಚಿನವರು ಕೊಲೆ, ಅತ್ಯಾಚಾರ ಮತ್ತು ಕಳ್ಳತನದಂತಹ ಗಂಭೀರ ಪ್ರಕರಣಗಳಲ್ಲಿ ಘೋಷಿತ ಅಪರಾಧಿಗಳಾಗಿದ್ದಾರೆ ಅಥವಾ ವಿಚಾರಣಾಧೀನರಾಗಿದ್ದಾರೆ ಎಂದು ಮುಂಗೇರ್ ಎಸ್‌ಪಿ ಆಶಿಷ್ ಭಾರ್ತಿ ತಿಳಿಸಿದರು.
ಪರಾರಿಯಾಗಿರುವವರಿಗಾಗಿ ಪೊಲೀಸರು ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
Next Story





