ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಗೆ ಫಾರೂಕ್ ಬಂಟ್ವಾಳ ನೇಮಕ

ಬಂಟ್ವಾಳ,ಸೆ.25:ಬಂಟ್ವಾಳ ತಾಲೂಕು ಮಟ್ಟದ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಯ ಸಂಚಾಲಕರಾಗಿ ಪತ್ರಕರ್ತ ಫಾರೂಕ್ ಬಂಟ್ವಾಳ ಅವರು ನೇಮಕ ಗೊಂಡಿದ್ದಾರೆ.
ಸಮಿತಿಯ ಸಹ ಸಂಚಾಲಕರಾಗಿ ಉಮೇಶ್ ನಿರ್ಮಲ್, ಸವಿತಾ ನಿರ್ಮಲ್ ಹಾಗೂ ರಾಮರಾಯ ನಾಯಕ್ ಅವರನ್ನು ಆಯ್ಕೆ ಮಾಡಲಾಗಿದೆ.
ಮಕ್ಕಳ ಹಕ್ಕುಗಳ ಉಲ್ಲಂಘನೆಯನ್ನು ತಡೆಗಟ್ಟುವ ಉದ್ದೇಶದಿಂದ ಕಾರ್ಯಾಚರಿಸುತ್ತಿರುವ ಸಮಿತಿ, ಶಾಲಾ ಮಟ್ಟದಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ಹೊಂದಿರುವ ಸಮಿತಿಗೆ ಮಕ್ಕಳ ಹಕ್ಕುಗಳ ಉಲ್ಲಂಘನೆಯಾದಲ್ಲಿ .ಮೊಬೈಲ್ (9844740487)ದೂರು ಸಲ್ಲಿಸಬಹುದಾಗಿದಎಂದು ಅಧ್ಯಕ್ಷರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





