ಕೋಟ : ಅತ್ಯಾಚಾರ ಆರೋಪಿಗೆ ನ್ಯಾಯಾಂಗ ಬಂಧನ
ಕೋಟ, ಸೆ.25: ಯುವತಿಯ ಅತ್ಯಾಚಾರ ಪ್ರಕರಣದ ಆರೋಪಿ ಭಾಸ್ಕರ ಆಚಾರಿ ಎಂಬಾತನನ್ನು ಕೋಟ ಪೊಲೀಸರು ಬಂಧಿಸಿ ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.
ಎರಡು ಮಕ್ಕಳ ತಂದೆಯಾಗಿರುವ ಭಾಸ್ಕರ ಆಚಾರಿ ಎಂಟು ತಿಂಗಳ ಹಿಂದೆ ನೆರಮನೆಯ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಆಕೆಗೆ ಬೆದರಿಕೆಯೊಡ್ಡಿ ದ್ದನು. ಇದರಿಂದ ಗರ್ಭವತಿಯಾದ ಆಕೆ ಇದೀಗ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





