ಮಲ್ಪೆ : ಸೇತುವೆಯಿಂದ ಹೊಳೆಗೆ ಹಾರಿ ಆತ್ಮಹತ್ಯೆ

ಮಲ್ಪೆ, ಸೆ.25: ಕಲ್ಯಾಣಪುರ ಸೇತುವೆಯಿಂದ ವ್ಯಕ್ತಿಯೊಬ್ಬರು ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತರನ್ನು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ಶಿವಸ್ವಾಮಿ(40) ಎಂದು ಗುರುತಿಸಲಾಗಿದೆ. ಇವರು ಸೆ.23ರಂದು ಸಂಜೆ ಆರು ಗಂಟೆ ಸುಮಾರಿಗೆ ಕಲ್ಯಾಣಪುರ ಸೇತುವೆಯಿಂದ ಹೊಳೆಗೆ ಹಾರಿ ನೀರಿನಲ್ಲಿ ಕೊಚ್ಚಿ ಹೋಗಿ ನಾಪತ್ತೆ ಯಾಗಿದ್ದರು. ಸೆ.25ರಂದು ಬೆಳಗ್ಗೆ ಮೂಡುತೋನ್ಸೆ ಗ್ರಾಮದ ಬಾಳಿಗರಕುದ್ರು ಎಂಬಲ್ಲಿ ಸ್ವರ್ಣ ನದಿಯ ದಡದಲ್ಲಿ ಶಿವಸ್ವಾಮಿ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





