ಎ. ಹರೀಶ್ ಕಿಣಿ, ದಿನೇಶ್ ಪುತ್ರನ್ ಜಿಲ್ಲಾ ಎನ್‌ಎಸ್‌ಯುಐ ಉಸ್ತುವಾರಿ

ಉಡುಪಿ, ಸೆ.25: ಉಡುಪಿ ಜಿಲ್ಲೆಯಾದ್ಯಂತ ಎನ್‌ಎಸ್‌ಯುಐ ಸಂಘಟನೆಯನ್ನು ಚುರುಕುಗೊಳಿಸುವಂತೆ, ರಾಷ್ಟ್ರೀಯ ಎನ್‌ಎಸ್‌ಯುಐ ಉಸ್ತುವಾರಿಯಾಗಿರುವ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್‌ರ ಸೂಚನೆ ಮೇರೆಗೆ ಕಾಂಗ್ರೆಸ್ ಮುಖಂಡರಾದ ದಿನೇಶ್ ಪುತ್ರನ್ ಹಾಗೂ ಅಲೆವೂರು ಹರೀಶ್ ಕಿಣಿ ಇವರನ್ನು ಉಡುಪಿ ಜಿಲ್ಲಾ ಎನ್‌ಎಸ್‌ಯುಐನ ಉಸ್ತುವಾರಿಗಳಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ನೇಮಿಸಿದ್ದಾರೆ.
ಇತ್ತೀಚಿಗೆ ಆಸ್ಕರ್ ಫೆರ್ನಾಂಡಿಸ್ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರುಗಳ ಸಭೆಯಲ್ಲಿ ಈ ನೇಮಕಾತಿ ನಡೆದಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





