ಸಿಡಿಲು ಬಡಿದು ದನಗಾಹಿ ಮೃತ್ಯು
ಶಿವಮೊಗ್ಗ, ಸೆ. 26: ದನ ಮೇಯಿಸಲು ತೆರಳಿದ್ದ ವ್ಯಕ್ತಿಯೋರ್ವರು ಸಿಡಿಲು ಬಡಿದು ಮೃತಪಟ್ಟಿರುವ ಘಟನೆ ಶಿವಮೊಗ್ಗ ತಾಲೂಕಿನ ಬಸಾಪುರ ಗ್ರಾಮದಲ್ಲಿ ನಡೆದಿದೆ.
ಸಣ್ಣ ತಿಮ್ಮಬೋವಿ (60) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.
ಸಣ್ಣ ತಿಮ್ಮಬೋವಿ ಅವರು ಗ್ರಾಮದ ಬಯಲು ಪ್ರದೇಶದಲ್ಲಿ ಯೋಗೀಶ್ ಮತ್ತು ನಾಗಪ್ಪ ಎಂಬವರ ಜತೆ ಕುರಿ ಮತ್ತು ದನ ಕಾಯುತ್ತಿದ್ದ ವೇಳೆ ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಯೋಗೀಶ್ ಹಾಗೂ ನಾಗಪ್ಪರವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
Next Story





