ಚಿನ್ನಾಭರಣ ಕಳವು
ಬೆಂಗಳೂರು, ಸೆ.26: ಬೈಕ್‌ನಲ್ಲಿ ಬಂದ ಇಬ್ಬರು, ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರ ಕಳವು ಮಾಡಿರುವ ಘಟನೆ ಇಲ್ಲಿನ ಆರ್‌ಟಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಮಲಾನಗರದ 1ನೆ ಮುಖ್ಯರಸ್ತೆ, 9ನೆ ಕ್ರಾಸ್ ನಿವಾಸಿ ಮಂಜುಳಾ ಎಂಬುವರು ಸೋಮವಾರ ಸಂಜೆ 5.30ರಲ್ಲಿ ಎಚ್‌ಎಂಟಿ ಲೇಔಟ್ 7ನೆ ಕ್ರಾಸ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್‌ನಲ್ಲಿ ಹಿಂಬಾಲಿಸಿದ ಇಬ್ಬರು, ಕತ್ತಿನಲ್ಲಿದ್ದ 42 ಗ್ರಾಂ ಸರ ಕಸಿದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
Next Story





