ಎಸೆಸೆಲ್ಸಿ ಪರೀಕ್ಷೆ: ಅವಧಿ ವಿಸ್ತರಣೆ

ಬೆಂಗಳೂರು, ಸೆ.26: 2018ನೆ ಮಾರ್ಚ್ -ಎಪ್ರಿಲ್ ತಿಂಗಳಿನಲ್ಲಿ ನಡೆಯಲಿರುವ ಎಸೆಸೆಲ್ಸಿ ಪರೀಕ್ಷೆಗೆ ಕುಳಿತುಕೊಳ್ಳುವ ಅಭ್ಯರ್ಥಿಗಳ ನೋಂದಣಿ, ಪರೀಕ್ಷಾ ಶುಲ್ಕ ಹಾಗೂ ನಾಮಿನಲ್ ರೋಲ್ ಪ್ರಸ್ತಾವನೆಗಳನ್ನು ಸಲ್ಲಿಸು ದಿನಾಂಕ ವಿಸ್ತರಿಸಲಾಗಿದೆ.
ಅಕ್ಟೋಬರ್ 9 ಖಾಸಗಿ ಅಭ್ಯರ್ಥಿಗಳಾಗಿ ಜಿಲ್ಲಾ ಉಪ ನಿರ್ದೇಶಕರ ಕಚೇರಿಯಲ್ಲಿ ನೋಂದಣಿ ಮಾಡಲು, ಅಕ್ಟೋಬರ್ 10ರಂದು ಶಾಲೆಯವರು ಶಾಲಾ/ಖಾಸಗಿ/ಪುರಾವರ್ತಿತ ಅಭ್ಯರ್ಥಿಗಳಿಂದ ಪರೀಕ್ಷಾ ಶುಲ್ಕ ಸ್ವೀಕಾರ, ಅಕ್ಟೋಬರ್ 11ರಂದು ಪರೀಕ್ಷಾ ಶುಲ್ಕ ಬ್ಯಾಂಕಿಗೆ ಎನ್‌ಇಎಫ್‌ಟಿ ಚಲನ್ ಮೂಲಕ ಜಮೆ ಮಾಡಲು ಹಾಗೂ ಅಕ್ಟೋಬರ್ 12 ರಂದು ನಾಮಿನಲ್ ರೋಲ್ ಪ್ರಸ್ತಾವನೆ ಹಾಗೂ ಬ್ಯಾಂಕ್ ಚಲನ್‌ನ ಮೂಲ ಪ್ರತಿಯನ್ನು ಶಾಲೆಗಳಿಂದ ಮಂಡಳಿಗೆ ತಲುಪಿಸಲು ಕೋರಲಾಗಿದೆ.
Next Story





