ರಿಮೋಟ್ ಕಂಟ್ರೋಲ್‌ನಿಂದ ನಡೆಯುವ ಗುಜರಾತ್: ರಾಹುಲ್ ಗಾಂಧಿ

ಮೊರ್ಬಿ (ಗುಜರಾತ್), ಸೆ. 26: ರೈತರು, ಸಣ್ಣ ವ್ಯಾಪಾರಸ್ಥರು, ಕಾರ್ಮಿಕರು ಸೇರಿದಂತೆ ಗುಜರಾತ್‌ನ ಜನರು ಶ್ರಮವಹಿಸಿ ದುಡಿಯುತ್ತಿದ್ದಾರೆ. ಆದರೆ, ಇದರ ಲಾಭ ಪಡೆಯುವವರು 5ರಿಂದ 10 ಮಂದಿ ಕೈಗಾರಿಕೋದ್ಯಮಿಗಳು. ಈ ಮೋದಿ ಮಾದರಿ ಬದಲಾಯಿಸಬೇಕಿದೆ ಎಂದು ಕಾಂಗ್ರೆಸ್‌ನ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಸೌರಾಷ್ಟ್ರ ವಲಯದಲ್ಲಿ ನಡೆದ ನವ್‌ಸರ್ಜನ್ ಯಾತ್ರೆಯ ಎರಡನೇ ದಿನವಾದ ಮಂಗಳವಾರ ಸಭೆ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದರು ಹಾಗೂ ರಾಜ್ಯದಲ್ಲಿ ಸರಕಾರವನ್ನು ರಿಮೋಟ್ ಕಂಟ್ರೋಲ್‌ನಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡಲು ಸಾಧ್ಯವಾಗಲಾರದು ಎಂದರು. ನೀವು ಗುಜರಾತ್ ಅನ್ನು ಬದಲಾಯಿಸಲು ಬಯಸುತ್ತೀರಾದರೆ, ನೀವೇ ಸರಕಾರ ನಡೆಸಿ. ರಿಮೋಟ್ ಕಂಟ್ರೋಲ್ ಕಾರ್ಯ ನಿರ್ವಹಿಸದು ಎಂದು ಅವರು ಹೇಳಿದ್ದಾರೆ. ಗುಜರಾತ್‌ನಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ, ಉದ್ಯೋಗ ಸೃಷ್ಟಿಸಲಾಗುವುದು. ರೈತರಿಗೆ ನೆರವು ನೀಡಲಾಗುವುದು ಹಾಗೂ ಸಾಲ ಮನ್ನಾ ಮಾಡಲಾಗುವುದು ಎಂದು ಹೇಳಿದರು.
ಮನೆ ಇಲ್ಲದ ಜನರಿಗೆ ಮನೆ ನೀಡಲಾಗುವುದು. ಕಾಂಗ್ರೆಸ್ ಸರಕಾರ ಬಡವರ ಹಾಗೂ ದುರ್ಬಲರ ಸರಕಾರ. ನೀವು ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತನ್ನಿ ಎಂದು ರಾಹುಲ್ ಗಾಂಧಿ ಆಗ್ರಹಿಸಿದರು.





