ಕೊಂಕಣ ರೈಲು ಹಳಿಗಳ ರೈಲ್ವೆ ಹಳಿ ದುರಸ್ತಿ ಮುಂದೂಡಿಕೆ
ಉಡುಪಿ, ಸೆ.26: ಮಂಗಳೂರು ಆಸುಪಾಸಿನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೆ.27ರಂದು ಮಂಗಳೂರು ಪಡೀಲ್ ಮತ್ತು ಜೋಕಟ್ಟೆ ನಡುವಿನ ಕೊಂಕಣ ರೈಲು ಹಳಿಗಳ ದುರಸ್ತಿ ಹಾಗೂ ಸಬ್‌ವೇಗಳಿಗೆ ಆರ್‌ಸಿಸಿ ಬ್ಲಾಕ್‌ಗಳನ್ನು ಅಳವಡಿಸುವ ಕಾಮಗಾರಿಯನ್ನು ಮುಂದೂಡಲಾಗಿದ್ದು ಅ.11ಕ್ಕೆ ನಿಗದಿ ಪಡಿಸಲಾಗಿದೆ.
ಆದುದರಿಂದ ಸೆ.27ರಂದು ಪೂರ್ವ ನಿಗದಿಯಾದಂತೆ ಎಲ್ಲಾ ರೈಲುಗಳು ಓಡಾಟ ನಡೆಸಲಿವೆ ಎಂದು ಕೊಂಕಣ ರೈಲ್ವೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.
Next Story





