ಪತ್ರಕರ್ತ ಸಂತನು ಭೌಮಿಕ್ ಹತ್ಯೆ: ಸಿಟ್‌ನಿಂದ ತನಿಖೆ ನಡೆಸಲು ನಿರ್ಧಾರ

ಅಗರ್ತಲಾ, ಸೆ. 26: ಸ್ಥಳೀಯ ಟಿ.ವಿ. ವಾಹಿನಿಯ ವರದಿಗಾರ ಸಂತನು ಭೌಮಿಕ್ ಅವರ ಬರ್ಬರ ಹತ್ಯೆ ಪ್ರಕರಣದ ತನಿಖೆ ನಡೆಸಲು ಹಿರಿಯ ಐಪಿಎಸ್ ಅಧಿಕಾರಿ ನೇತೃತ್ವದಲ್ಲಿ ಸಿಟ್ ರೂಪಿಸಲು ತ್ರಿಪುರಾ ಸರಕಾರ ನಿರ್ಧರಿಸಿದೆ.
ಮೃತರ ಕುಟುಂಬಕ್ಕೆ ಸರಕಾರ 10 ಲಕ್ಷ ರೂ. ಪರಿಹಾರ ಘೋಷಿಸಿದೆ. ಈ ಹತ್ಯೆ ಪ್ರಕರಣದ ತನಿಖೆ ನಡೆಸಲು ಭಾರತೀಯ ಪತ್ರಿಕಾ ಮಂಡಳಿ ಈಗಾಗಲೇ ತಂಡವೊಂದನ್ನು ಕಳುಹಿಸಿ ಕೊಟ್ಟಿದೆ.
ಸಂಪುಟ ಭೌಮಿಕ್ ಹತ್ಯೆ ಬಗ್ಗೆ ಚರ್ಚೆ ನಡೆಸಿದೆ ಹಾಗೂ ಹಿರಿಯ ಐಪಿಎಸ್ ಅಧಿಕಾರಿ ನೇತೃತ್ವದಲ್ಲಿ ಸಿಟ್ ರೂಪಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ಹಾಗೂ ಹಣಕಾಸು ಸಚಿವ ಭಾನುಲಾಲ್ ಶಾ ತಿಳಿಸಿದ್ದಾರೆ.
Next Story





