ಬಾಲಿಯಲ್ಲಿ ಜ್ವಾಲಾಮುಖಿ ಸ್ಫೋಟ ಸನ್ನಿಹಿತ: 50,000 ಮಂದಿ ಸ್ಥಳಾಂತರ

ಕರಂಗಸೆಮ್ (ಇಂಡೋನೇಶ್ಯ), ಸೆ. 26: ಇಂಡೋನೇಶ್ಯದ ಬಾಲಿ ದ್ವೀಪದಲ್ಲಿರುವ ಅತ್ಯಂತ ಎತ್ತರದ ಜ್ವಾಲಾಮುಖಿಯಿಂದ ಮಂಗಳವಾರ ದಟ್ಟ ಬಿಳಿಹೊಗೆ ಹೊರಹೊಮ್ಮಿದ್ದು, ಜ್ವಾಲಾಮುಖಿ ಸ್ಫೋಟಕ್ಕೆ ಕ್ಷಣಗಣನೆ ಆರಂಭವಾಗಿದೆ.
ಇತ್ತೀಚಿನ ದಿನಗಳಲ್ಲಿ ಅನುಭವಕ್ಕೆ ಬಂದ ಪ್ರಬಲ ಜ್ವಾಲಾಮುಖಿ ಕಂಪನಗಳು ಮತ್ತು ಬಿಳಿ ಹೊಗೆೆ ಜ್ವಾಲಾಮುಖಿ ಸ್ಫೋಟ ಸನ್ನಿಹಿತವಾಗಿರುವುದನ್ನು ಸೂಚಿಸಿದೆ ಎನ್ನಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ವೌಂಟ್ ಅಗಂಗ್ ಪರ್ವತದ ತಪ್ಪಲಿನಲ್ಲಿರುವ ಗ್ರಾಮಗಳ 50,000ಕ್ಕೂ ಅಧಿಕ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ.
ಇಂಡೋನೇಶ್ಯದ ಅಧಿಕಾರಿಗಳು ಜ್ವಾಲಾಮುಖಿ ಪರ್ವತದ ಸುತ್ತ 12 ಕಿ.ಮೀ. ವ್ಯಾಪ್ತಿಯನ್ನು ವಾಸರಹಿತ ವಲಯ ಎಂಬುದಾಗಿ ಘೋಷಿಸಿದ್ದಾರೆ.
Next Story





