Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ರಾಜಕೀಯ ರಂಗಕ್ಕೆ ಧುಮುಕಲು ಸಿದ್ಧರಾದ...

ರಾಜಕೀಯ ರಂಗಕ್ಕೆ ಧುಮುಕಲು ಸಿದ್ಧರಾದ ಕಮಲ್ ಹಾಸನ್ ಸಂದರ್ಶನ

ವಾರ್ತಾಭಾರತಿವಾರ್ತಾಭಾರತಿ26 Sept 2017 9:42 PM IST
share
ರಾಜಕೀಯ ರಂಗಕ್ಕೆ ಧುಮುಕಲು ಸಿದ್ಧರಾದ ಕಮಲ್ ಹಾಸನ್ ಸಂದರ್ಶನ

ರಾಜಕೀಯ ರಂಗಕ್ಕೆ ಧುಮುಕಲು ಸಜ್ಜಾಗಿರುವ ದಕ್ಷಿಣ ಭಾರತದ ಖ್ಯಾತ ನಟ, ಎಡಪಂಥೀಯ ಚಿಂತನೆಗಳ ಬಗ್ಗೆ ಕಳಕಳಿ ಹೊಂದಿರುವ ಕಮಲ್ ಹಾಸನ್ ಅವರು ಜನರಿಗೆ ಒಳ್ಳೆಯದಾಗುತ್ತದೆ ಎಂದಾದರೆ ಬಿಜೆಪಿಯೊಂದಿಗೆ ಸ್ನೇಹ ಅಥವಾ ಸಿನಿಮಾ ರಂಗಕ್ಕೆ ತಿಲಾಂಜಲಿ ಸೇರಿದಂತೆ ಯಾವುದಕ್ಕೂ ಸಿದ್ಧರಾಗಿದ್ದೇನೆ ಎಂದಿದ್ದಾರೆ. ಅರುಣ್ ರಾಮ್ ಅವರಿಗೆ ಕಮಲ್ ನೀಡಿರುವ ಸಂದರ್ಶನದ ಆಯ್ದ ಭಾಗಗಳು ಇಲ್ಲಿವೆ.

►ನೀವು ರಾಜಕೀಯ ಪಕ್ಷವೊಂದನ್ನು ಸ್ಥಾಪಿಸಲು ನಿರ್ಧರಿಸಿದ್ದೀರಿ. ಇದಕ್ಕೆ ಕಾರಣ?

ಅದು ದಿಢೀರ್ ನಿರ್ಧಾರವಲ್ಲ, ಅದು ಕಾಲಕ್ರಮೇಣ ಮೂಡಿದ ಪ್ರಮುಖ ನಿರ್ಧಾರ. ಸಿಟ್ಟು ಕೇವಲ ಅದರ ಒಂದು ಭಾಗ ಮಾತ್ರವಾಗಿದೆ. ಸಿಟ್ಟು ನಕ್ಸಲ್ ನಿರ್ಧಾರದಲ್ಲಿಯೂ ಇದೆ, ಆದರೆ ಅಲ್ಲೊಂದು ಸಿದ್ಧಾಂತವಿದೆ.

►ನಿಮ್ಮ ಸಿದ್ಧಾಂತವೇನು?

ನನಗೆ ಆಯ್ಕೆ ಮಾಡಿಕೊಳ್ಳಲು ಸಿದ್ಧಾಂತಗಳ ಗುಚ್ಛವೇ ಇದೆ. ನಾನು ಕೆಲವು ಕಮ್ಯುನಿಸ್ಟ್ ಮತ್ತು ಸಮಾಜವಾದಿ ಆದರ್ಶಗಳ ಅಭಿಮಾನಿಯಾಗಿದ್ದೇನೆ. ಕೆಲವು ವಿಫಲಗೊಂಡಿವೆ. ಕೆಲವು ಯಶಸ್ಸು ಕಂಡಿವೆ. ಅವರೆಲ್ಲ ಎಲ್ಲಿ ವಿಫಲರಾಗಿದ್ದರು ಎನ್ನುವುದನ್ನು ಅರ್ಥ ಮಾಡಿಕೊಳ್ಳುವಷ್ಟು ಜೀವನಾನುಭವ ನನ್ನದು.

►ನಿಮ್ಮ ನಿಲುವು ಎಡಪಂಥೀಯ ಚಿಂತನೆಗಳ ಪರವಾಗಿಯೇ ಇರಲಿದೆಯೇ?

ಅದು ಅತ್ಯಗತ್ಯವಲ್ಲ. ಜನರು ಮುಖ್ಯವಾಗಿರುವುದರಿಂದ ನಾನು ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಬಹುದು. ನಾನು ಸೇವೆ ಸಲ್ಲಿಸಲು ಸಿದ್ಧನಿದ್ದೇನೆ, ಆದರೆ ನನ್ನ ಚಿಂತನೆಗಳು ಇನ್ನೂ ಮುಂದುವರಿದಿವೆ.

►ರಾಜಕೀಯದಲ್ಲಿ ಬಿಡುವು ಎನ್ನುವುದೇ ಇರುವುದಿಲ್ಲ. ನೀವು ಸಿನಿಮಾ ರಂಗವನ್ನು ತೊರೆಯುತ್ತೀರಾ?

ರಾಜಕೀಯವೊಂದು ದೊಡ್ಡ ಆಟ,ಅಲ್ಲಿ ಕಮಲ್ ಹಾಸನ್ ಅನುಪಸ್ಥಿತಿ ಗಮನಕ್ಕೇ ಬರುವುದಿಲ್ಲ ಮತ್ತು ಕಲಾ ಪ್ರಪಂಚವು ದೊಡ್ಡ ಸಾಗರವಾಗಿದೆ.

►ನೀವು ನಟನೆಯನ್ನು ತೊರೆಯುತ್ತೀರಾ?

ವಿಧಿವತ್ತಾಗಿ ರಾಜಕೀಯವನ್ನು ಪ್ರವೇಶಿಸಿದರೆ ನಾನು ಹಾಗೆ ಮಾಡಬೇಕಾಗುತ್ತದೆ. ಆದರೆ ಸಿನಿಮಾ ರಂಗದೊಂದಿಗೆ ನಂಟನ್ನು ಕಡಿದುಕೊಳ್ಳುವುದಿಲ್ಲ.

►ನಿಮ್ಮ ಭವಿಷ್ಯದ ಯೋಜನೆಯಲ್ಲಿ ಬಿಜೆಪಿಯ ಸ್ಥಾನವೇನು?

ಸದ್ಯ ಅವರು ತೀವ್ರ ಬಲಪಂಥದತ್ತ ಸಾಗುತ್ತಿದ್ದಾರೆ. ಬೀಫ್‌ನಂತಹ ವಿಷಯಗಳ ಕುರಿತು ನನಗೆ ಸರಕಾರದ ವಿರುದ್ಧ ಆಕ್ರೋಶವಿದೆ. ನಾನೂ ಬೀಫ್ ತಿನ್ನುತ್ತಿದ್ದೆ, ಆದರೆ ಬಳಿಕ ಅದನ್ನು ನಿಲ್ಲಿಸಿದ್ದೇನೆ. ಅದರರ್ಥ ಬೇರೆಯವರು ಬೀಫ್ ತಿನ್ನಬಾರದು ಎಂದಲ್ಲ.

►ಬಿಜೆಪಿಯೊಂದಿಗೆ ಮೈತ್ರಿ ಸಾಧ್ಯತೆಯನ್ನು ತಳ್ಳಿ ಹಾಕುತ್ತೀರಾ?

ನನ್ನ ಸಿದ್ಧಾಂತಗಳಿಗೆ ಅಡ್ಡಿಯಾಗದಿದ್ದರೆ ಮತ್ತು ಅದು ಕೇವಲ ಆಡಳಿತದ ಕುರಿತಾಗಿದ್ದರೆ ಅದರೊಂದಿಗೆ ಮೈತ್ರಿ ಮಾಡಿಕೊಳ್ಳಬಹುದು. ರಾಜ್ಯದ ಅಭಿವೃದ್ಧಿಯ ಕುರಿತೂ ಯೋಚಿಸಬೇಕಾಗುತ್ತದೆ. ಅವರಿಗೆ ನನ್ನ ಸಿದ್ಧಾಂತಗಳು ಹಿತವಾಗುತ್ತವೆಯೇ ಎನ್ನುವುದು ನನಗೆ ಗೊತ್ತಿಲ್ಲ. ರಾಜಕೀಯದಲ್ಲಿ ಅಸ್ಪೃಶ್ಯತೆ ಎನ್ನುವುದಿಲ್ಲ, ಜನರ ಹಿತಾಸಕ್ತಿಗೆ ಪೂರಕವಾಗುತ್ತದೆ ಎನ್ನುವುದಾದರೆ ಇದು ಒಳ್ಳೆಯದೇ.

►ನೀವು ವಿಚಾರವಾದಿ ಎನ್ನುವ ಅಂಶ ನೀವು ಬಿಜೆಪಿಯೊಂದಿಗೆ ಕೈ ಜೋಡಿಸುವುದನ್ನು ತಡೆಯುವುದಿಲ್ಲವೇ?

ವಿಚಾರವಾದಿಯಾಗಿರುವುದೆಂದರೆ ನನ್ನ ಅರ್ಥದಲ್ಲಿ ದೇವಸ್ಥಾನಗಳ ಧ್ವಂಸವಲ್ಲ. ರಾತ್ರಿ ಬೆಳಗಾಗುವುದರೊಳಗೆ ಭಕ್ತಿಯನ್ನು ನಿರ್ಮೂಲಿಸಲು ಸಾಧ್ಯವಿಲ್ಲ, ಕಾಲಕ್ರಮೇಣ ಅದು ಸಂಭವಿಸಬಹುದು.

►ಇದು ಕಾಂಗ್ರೆಸ್ ಮತ್ತು ಡಿಎಂಕೆಗೂ ಅನ್ವಯಿಸುತ್ತದೆಯೇ?

ಅವು ನಾನು ಆಯ್ಕೆ ಮಾಡಿಕೊಂಡಿರುವ ಮಾರ್ಗಕ್ಕೆ ಅಡ್ಡಿಯಾಗುವುದಿಲ್ಲ ಎಂದಾದರೆ ಮಾತ್ರ ಇದೊಂದು ವಿಷಯವೇ ಅಲ್ಲ. ನಾನು ಭ್ರಷ್ಟಾಚಾರದ ವಿರೋಧಿಯಾಗಿದ್ದೇನೆ. ಭ್ರಷ್ಟರೊಂದಿಗೆ ನಾನು ನಂಟು ಹೊಂದುವುದಿಲ್ಲ. ಈ ವಿಷಯದಲ್ಲಿ ನಾನೆಂದೂ ರಾಜಿ ಮಾಡಿಕೊಳ್ಳುವುದಿಲ್ಲ. ಹೀಗಾಗಿ ನನಗೆ ಮೈತ್ರಿ ಆಯ್ಕೆಗಳು ಕಡಿಮೆ.

►ನಿಮ್ಮ ಆದ್ಯತೆ ಏನು?

ಬಡವರನ್ನು ತಲುಪುವುದು. ಕೊನೆಯ ಬಡ ವ್ಯಕ್ತಿಯನ್ನು ತಲುಪಲು ಸಾಧ್ಯವಾಗದಿದ್ದರೆ ನಮ್ಮ ಸಂವಿಧಾನವೇ ಸರಿಯಿಲ್ಲ ಎಂದಾಗುತ್ತದೆ.

►ಮತ್ತು ಭ್ರಷ್ಟಾಚಾರ?

ಭ್ರಷ್ಟಾಚಾರ ಒಬ್ಬ ವ್ಯಕ್ತಿಗೆ ಸೀಮಿತವಾಗಿಲ್ಲ. ವ್ಯಕ್ತಿಯೋರ್ವ ತನ್ನ ಮತವನ್ನು 5,000 ರೂ.ಗೆ ಮಾರಾಟ ಮಾಡಿಕೊಂಡಾಗಲೇ ಭ್ರಷ್ಟಾಚಾರ ಆರಂಭಗೊಳ್ಳುತ್ತದೆ. ನಾವು ಜನರಲ್ಲಿ ಅರಿವನ್ನು ಮೂಡಿಸಬೇಕು ಮತ್ತು ಭ್ರಷ್ಟಾಚಾರವನ್ನು ಅಂತ್ಯಗೊಳಿಸಬೇಕು. ನಾವು ಒಮ್ಮೆ ನರಮಾಂಸ ಭಕ್ಷಕರಾಗಿದ್ದೆವು ಯಾರೋ ಜನರಲ್ಲಿ ಅರಿವನ್ನು ಮೂಡಿಸಲು ಸಮರ್ಥರಾಗಿದ್ದರು ಮತ್ತು ಏಕಾಏಕಿ ಆ ಪದ್ಧತಿ ಅಂತ್ಯಗೊಂಡಿತ್ತು.

►ಭ್ರಷ್ಟಾಚಾರವನ್ನು ಏಕಾಏಕಿ ನಿಲ್ಲಿಸುವ ವಿಶ್ವಾಸ ನಿಮಗಿದೆಯೇ?

ಇಲ್ಲ. ನಾನು ಏಕಾಏಕಿ ಎಂಬ ಶಬ್ದವನ್ನು ಬಳಸಿದಾಗ ನೀವು ಸುದೀರ್ಘ ಇತಿಹಾಸವನ್ನು ನೋಡಬೇಕು ಮತ್ತು ಆಗ ಅದು ಏಕಾಏಕಿ ಅಂತ್ಯವೆಂದಾಗುತ್ತದೆ. ರಾತ್ರಿ ಬೆಳಗಾಗುವುದರಲ್ಲಿ ಭ್ರಷ್ಟಾಚಾರವನ್ನು ನಿಲ್ಲಿಸಲು ಸಾಧ್ಯವಿಲ್ಲ. ನೀವು ಭ್ರಷ್ಟಾಚಾರವನ್ನು ನಿಯಂತ್ರಿಸಬಹುದು ಮತ್ತು ಅದು ಅಂತ್ಯದ ಆರಂಭವಾಗುತ್ತದೆ.

►ರಾಜಕೀಯ ಪ್ರವೇಶಿಸಿದರೆಂದರೆ ನೀವು ಬಹುಶಃ ನಿಮ್ಮ ಸ್ನೇಹಿತ ರಜನಿಕಾಂತ್ ಸೇರಿದಂತೆ ಕೆಲವರನ್ನು ಟೀಕಿಸಬೇಕಾಗಬಹುದು?

ಟೀಕೆ ಅವಮಾನವಲ್ಲ. ಅದನ್ನು ರಚನಾತ್ಮಕವಾಗಿ ಮತ್ತು ಸಮಚಿತ್ತದೊಂದಿಗೆ ಮಾಡಬಹುದು. ರಜನಿ ಮತ್ತು ನಾನು ಈ ಬಗ್ಗೆಯೇ ಪರಸ್ಪರ ವಾಗ್ದಾನ ಪಡೆದುಕೊಂಡಿದ್ದೇವೆ. ನಮ್ಮ ಮಾರ್ಗಗಳು ಭಿನ್ನವಾಗಿವೆ, ನಾವು ಮಾಡುವ ಚಿತ್ರಗಳ ಬಗ್ಗೆಯೂ ನಾವು ಪರಸ್ಪರರನ್ನು ಒಪ್ಪಿಕೊಳ್ಳುವುದಿಲ್ಲ.

►ತಮಿಳುನಾಡು ಮುಖ್ಯಮಂತ್ರಿಯಾಗಲು ಯೋಚಿಸಿದ್ದೀರಾ?

ಇಲ್ಲ. ನಾನು ಮುಖ್ಯಮಂತ್ರಿಯಾಗಲು ಬಯಸಿದ್ದೇನೆ ಎಂದು ಮಾಧ್ಯಮಗಳು ಹೇಳುವುದು ಬಾಲಿಶತನವಾಗಿದೆ.

►ಇನ್ನೋರ್ವ ನಾಯಕರ ಕೈಕೆಳಗೆ ಕೆಲಸ ಮಾಡುತ್ತೀರಾ?

ಜನರಿಗೆ ಒಳ್ಳೆಯದಾಗುತ್ತದೆ ಎಂದರೆ ಗುಂಪಿನಲ್ಲಿ ಗೋವಿಂದನಾಗಲೂ ನಾನು ಸಿದ್ಧ.

►ನೀವು ಚುನಾವಣೆಯಲ್ಲಿ ಸ್ಪರ್ಧಿಸಿದರೆ ಯಾವ ಕ್ಷೇತ್ರ ಆಯ್ದುಕೊಳ್ಳುತ್ತೀರಿ....ನಗರ ಅಥವಾ ಗ್ರಾಮ?

ಗ್ರಾಮ ನನ್ನ ಮೊದಲ ಆಯ್ಕೆ

►ರಾಜಕೀಯ ಸಿನಿಮಾವೊಂದನ್ನು ನಾವು ನಿರೀಕ್ಷಿಸಬಹುದೇ?

ಅಂತಹ ಒಂದು ಚಿತ್ರದ ಯೋಜನೆ ಸಿದ್ಧವಾಗುತ್ತಿದೆ. ಈಗ ಇಷ್ಟೊಂದು ಮಾಧ್ಯಮಗಳಿರುವಾಗ ರಾಜಕೀಯ ಸಿದ್ಧಾಂತಗಳ ಮಾರಾಟಕ್ಕಾಗಿ ಸಿನಿಮಾಗಳ ಅಗತ್ಯವೇ ಇಲ್ಲ. ಹಾಗೆ ಹೇಳಬೇಕೆಂದರೆ ‘ವಿಶ್ವರೂಪಂ-2’ ಮತ್ತು ‘ಶಭಾಷ್ ನಾಯ್ಡು’ ಚಿತ್ರಗಳಲ್ಲಿ ಕೆಲವು ರಾಜಕೀಯ ಸಂದೇಶಗಳಿವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X