ಶ್ರೀಲಂಕಾ: ರೊಹಿಂಗ್ಯಾ ಶಿಬಿರಕ್ಕೆ ಬೌದ್ಧ ಭಿಕ್ಕುಗಳಿಂದ ದಾಳಿ

ಕೊಲಂಬೊ, ಸೆ. 26: ಶ್ರೀಲಂಕಾ ರಾಜಧಾನಿ ಕೊಲಂಬೊ ಸಮೀಪದಲ್ಲಿರುವ ವಿಶ್ವಸಂಸ್ಥೆಯ ರೊಹಿಂಗ್ಯಾ ನಿರಾಶ್ರಿತರ ಸುರಕ್ಷಿತ ನಿವಾಸಕ್ಕೆ ಮಂಗಳವಾರ ದಾಳಿ ಮಾಡಿದ ಬೌದ್ಧ ಭಿಕ್ಕುಗಳು ನಿರಾಶ್ರಿತರನ್ನು ಸ್ಥಳಾಂತರಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು.
ಜನರ ಗುಂಪೊಂದು ಕೇಸರಿ ಬಟ್ಟೆ ಧರಿಸಿದ ಬೌದ್ಧ ಭಿಕ್ಕುಗಳ ನೇತೃತ್ವದಲ್ಲಿ ಬಹುಮಹಡಿ ಕಟ್ಟಡದ ಆವರಣದ ಬಾಗಿಲನ್ನು ಮುರಿದು ಒಳನುಗ್ಗಿತು. ಆಗ ಭಯಭೀತ ನಿರಾಶ್ರಿತರು ಮೇಲಿನ ಕೋಣೆಗಳಲ್ಲಿ ಅಡಗಿ ಕುಳಿತರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
‘‘ಉದ್ರಿಕ್ತ ಗುಂಪನ್ನು ನಾವು ಹೊರದಬ್ಬಿದ್ದೇವೆ. ನಿರಾಶ್ರಿತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು’’ ಎಂದು ಅವರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.
Next Story





