ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಲಕ್ಷ್ಮಿದೇವಮ್ಮ ಪ್ರತಿಮೆ ಅನಾವರಣ

ನವರಾತ್ರಿ ಪ್ರಯುಕ್ತ ಅನ್ನಾಹಾರ ತ್ಯಜಿಸಿ ವೃತಾಚರಣೆಯಲ್ಲಿರುವ ಮೇಯರ್ ಕವಿತಾ ಸನಿಲ್ ಇಂದು ಮಧ್ಯಾಹ್ನ ಮಂಗಳೂರಿನ ಪಚ್ಚನಾಡಿಯ ಚಾಮುಂಡೇಶ್ವರಿ ದೇವಾಲುಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಬೆಂಗಳೂರು, ಸೆ. 26: ನಾಡಿಗೆ ತಮ್ಮ ಪ್ರಾಣ ಅರ್ಪಿಸಿದ್ದ ನಾಡಪ್ರಭು ಕೆಂಪೇಗೌಡರ ಸೊಸೆ ಲಕ್ಷ್ಮಿದೇವಮ್ಮ ಅವರ 10 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ನಗರದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿಂದು ಪಾಲಿಕೆಯ ಮೇಯರ್ ಜಿ.ಪದ್ಮಾವತಿ ಅನಾವರಣಗೊಳಿಸಿದರು.
ಹತ್ತಾರು ಸ್ವಾಮೀಜಿಗಳು, ಪಾಲಿಕೆ ಸದಸ್ಯರು, ಆಡಳಿತ ಹಾಗೂ ವಿರೋಧ ಪಕ್ಷದ ನಾಯಕರು ಹಾಗೂ ನೂರಾರು ಅಭಿಮಾನಿಗಳ ಸಮ್ಮುಖದಲ್ಲಿ ಲಕ್ಷ್ಮಿದೇವಮ್ಮ ಅವರ ಪ್ರತಿಮೆಯನ್ನು ಅದ್ಧೂರಿಯಾಗಿ ಅನಾವರಣ ಮಾಡಲಾಯಿತು. ಈ ವೇಳೆ ಬಿಬಿಎಂಪಿ ಆವರಣದಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು.
ಕೋರಮಂಗಲದಲ್ಲಿರುವ ಲಕ್ಷ್ಮಿದೇವಮ್ಮರ ಸಮಾಧಿ ಸ್ಥಳದಿಂದ ಹತ್ತಾರು ಜಾನಪದ, ಕಲಾ ತಂಡಗಳೊಂದಿಗೆ ಅದ್ಧೂರಿ ಮೆರವಣಿಗೆ ಮೂಲಕ ಬೆಳ್ಳಿ ರಥದಲ್ಲಿ ಲಕ್ಷ್ಮಿದೇವಿ ಜ್ಯೋತಿ ಬಿಬಿಎಂಪಿ ಕೇಂದ್ರ ಕಚೇರಿವರೆಗೂ ಮೆರವಣಿಗೆ ನಡೆಸಿದರು. ಅನಂತರ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ತಯಾರಾದ 10 ಅಡಿಗಳ ಎತ್ತರದಲ್ಲಿ ನಿರ್ಮಿಸಿರುವ ಅವರ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲಾಯಿತು.
ಕೆಂಪೇಗೌಡರ ಸೊಸಿ ಲಕ್ಷ್ಮಿದೇವಮ್ಮನ ಸಮಾಧಿಯನ್ನು ಅಭಿವೃದ್ಧಿ ಪಡಿಸುವಂತೆ ಪಾಲಿಕೆಗೆ ಹಲವರು ಮನವಿ ಮಾಡಿ ಒತ್ತಡ ಹೇರಲಾಗಿತ್ತು. ಆದರೆ, ಈ ಸ್ಥಳ ಬಹುತೇಕ ಒತ್ತುವರಿಯಾಗಿದ್ದರಿಂದ ಉಳಿದ ಸ್ಥಳವನ್ನು ಮಾತ್ರ ಅಭಿವೃದ್ಧಿ ಮಾಡಲಾಗಿತ್ತು. ಅಲ್ಲದೆ, ಲಕ್ಷ್ಮಿದೇವಮ್ಮನ ಪ್ರತಿಮೆಯನ್ನು ಪಾಲಿಕೆ ಕಚೇರಿ ಆವರಣದಲ್ಲಿ ಪ್ರತಿಷ್ಠಾಪಿಸಬೇಕು ಎಂಬ ಬೇಡಿಕೆ ಮೊದಲಿನಿಂದಲೂ ಇತ್ತು.
ಇದುವರೆಗೂ ಅಧಿಕಾರ ನಡೆಸಿದ ಪಾಲಿಕೆ ವೆುೀಯರ್ಗಳು ಕೇವಲ ಭರವಸೆಗಳನ್ನು ನೀಡಿ ಸುಮ್ಮನಾಗಿದ್ದರು. ಆದರೆ, ಜಿ.ಪದ್ಮಾವತಿ ವೆುೀಯರ್ ಆಗಿ ಆಯ್ಕೆಯಾದ ನಂತರ ಲಕ್ಷ್ಮಿದೇವಮ್ಮ ಇತಿಹಾಸ, ಅವರ ತ್ಯಾಗ ಮುಂದಿನ ಪೀಳಿಗೆಗೆ ತಿಳಿಸಬೇಕೆಂಬ ಉದ್ದೇಶದಿಂದ ಕಂಚಿನ ಪ್ರತಿಮೆ ಮಾಡಿಸುವುದಾಗಿ ಭರವಸೆ ನೀಡಿದ್ದರು. ಅಲ್ಲದೆ, ತಮ್ಮ ಆಡಳಿತಾವಧಿಯಲ್ಲಿಯೇ ಅದನ್ನು ಪ್ರತಿಷ್ಠಾಪನೆ ಮಾಡಬೇಕು ಎಂದು ಹೇಳಿದರು. ಅದರಂತೆ ಪದ್ಮಾವತಿಯವರ ಅಧಿಕಾರ ಅವಧಿ ಮುಗಿಯುವ ಒಂದು ದಿನದ ಮೊದಲೇ ಪ್ರತಿಮೆ ಅನಾವರಣ ಮಾಡಿದ್ದಾರೆ.







