ಯುದ್ಧ ನಡೆದರೆ ಯಾರೂ ಗೆಲ್ಲುವುದಿಲ್ಲ: ಚೀನಾ

ಬೀಜಿಂಗ್, ಸೆ. 26: ಕೊರಿಯ ಪರ್ಯಾಯ ದ್ವೀಪದಲ್ಲಿ ಯಾವುದೇ ಸಂಘರ್ಷ ನಡೆದರೆ ಅದರಲ್ಲಿ ಯಾರೂ ಗೆಲ್ಲುವುದಿಲ್ಲ ಎಂದು ಚೀನಾ ಮಂಗಳವಾರ ಎಚ್ಚರಿಸಿದೆ.
ಉತ್ತರ ಕೊರಿಯ ಇತ್ತೀಚೆಗೆ ಪರಮಾಣು ಪರೀಕ್ಷೆ ನಡೆಸಿದ ಬಳಿಕ ಆ ದೇಶ ಮತ್ತು ಅಮೆರಿಕಗಳ ನಡುವಿನ ವಾಕ್ಸಮರ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಚೀನಾ, ಎರಡೂ ದೇಶಗಳು ಶಾಂತಿ ಮಾತುಕತೆಗೆ ಮುಂದಾಗಬೇಕೆಂದು ಮನವಿ ಮಾಡಿದೆ.
‘‘ತಮ್ಮ ಶ್ರೇಷ್ಠತೆಯನ್ನು ಸಾಧಿಸಲು ಮಾತಿನ ಸಮರದಲ್ಲಿ ತೊಡಗುವುದು ಹಾಗೂ ಪರಸ್ಪರರನ್ನು ಪ್ರಚೋದಿಸುವುದು ಸಂಘರ್ಷದ ಅಪಾಯವನ್ನು ಹೆಚ್ಚಿಸುತ್ತದೆ ಹಾಗು ರಾಜತಾಂತ್ರಿಕತೆಯ ಅವಕಾಶವನ್ನು ಕಿರಿದುಗೊಳಿಸುತ್ತದೆ’’ ಎಂದು ಚೀನಾ ವಿದೇಶ ಸಚಿವಾಲಯದ ವಕ್ತಾರ ಲು ಕಾಂಗ್ ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
Next Story





