ಭದ್ರತಾ ಪಡೆಯ ಎನ್‌ಕೌಂಟರ್‌ನಲ್ಲಿ ಭಯೋತ್ಪಾದಕ ಖಯ್ಯೂಮ್ ನಜರ್ ಹತ್ಯೆ

ಉರಿ, ಜಮ್ಮ-ಕಾಶ್ಮೀರ, ಸೆ. 26: ಜಮ್ಮು ಹಾಗೂ ಕಾಶ್ಮೀರದ ಉರಿ ವಲಯದಲ್ಲಿ ಭದ್ರತಾ ಪಡೆ ನಡೆಸಿದ ಎನ್‌ಕೌಂಟರ್‌ನಲ್ಲಿ ಲಷ್ಕರೆ-ತಯ್ಯಿಬದ ಮುಖ್ಯಸ್ಥ ಅಬ್ದುಲ್ ಖಯೂಮ್ ನಜರ್ ಹತನಾಗಿದ್ದಾನೆ.
2015ರಲ್ಲಿ ಕಾಶ್ಮೀರ ಕಣಿವೆಯಾದ್ಯಂತ ಮೊಬೈಲ್ ಟವರ್ ಹಾಗೂ ಟೆಲಿಕಾಂ ಕಚೇರಿಗಳ ಮೇಲೆ ಸರಣಿ ದಾಳಿ ನಡೆಸಿದ ಆರೋಪದಲ್ಲಿ ನಜರ್ ಸೇನೆಗೆ ಬೇಕಾದವನಾಗಿದ್ದ. ಉರಿ ವಲಯದಲ್ಲಿ ಭಾರತದೊಳಗೆ ನುಸುಳಲು ಪ್ರಯತ್ನಿಸುತ್ತಿದ್ದಾಗ ನಜರ್‌ನನ್ನು ಭದ್ರತಾ ಪಡೆ ಗಡಿ ರೇಖೆಯಲ್ಲಿ ಹತ್ಯೆಗೈದಿತು.
ಹಿಜ್ಬುಲ್ ಮುಜಾಹಿದ್ದೀನ್‌ನ ಬಂಡಾಯ ಕಮಾಂಡರ್ ಆಗಿರುವ ನಜರ್ ಅನಂತರ ಲಷ್ಕರೆ ಇಸ್ಲಾಂ ಅನ್ನು ಸ್ಥಾಪಿಸಿದ್ದ. ಈತನ ತಲೆಗೆ ಭದ್ರತಾ ಪಡೆ 10 ಲಕ್ಷ ರೂ. ಬಹುಮಾನ ಘೋಷಿಸಿತ್ತು.
ಉತ್ತರ ಕಾಶ್ಮೀರದಲ್ಲಿರುವ ಸೊಪೊರೆ ಹಾಗೂ ಸಮೀಪದ ಪ್ರದೇಶಗಳಲ್ಲಿ 6 ಮಂದಿ ನಾಗರಿಕರ ಸಾವಿಗೆ ಕಾರಣನಾಗಿದ್ದ ಮೊಬೈಲ್ ಟವರ್ ದಾಳಿಯ ಸೂತ್ರದಾರನಾಗಿದ್ದ ನಜರ್‌ನನ್ನು ಭದ್ರತಾ ಪಡೆ ಶೋಧಿಸುತ್ತಿತ್ತು.
Next Story





