ದಿಲ್ಲಿ ಮೆಟ್ರೋ ದರ ಮತ್ತೆ ಏರಿಕೆ

ಹೊಸದಿಲ್ಲಿ, ಸೆ. 26: ದಿಲ್ಲಿ ಮೆಟ್ರೋ ಪ್ರಯಾಣ ಅಕ್ಟೋಬರ್‌ನಿಂದ ತುಟ್ಟಿಯಾಗಲಿದೆ. ಈ ವರ್ಷದಲ್ಲಿ ಪ್ರಯಾಣ ದರ ಹೆಚ್ಚಾಗುತ್ತಿರುವುದು ಇದು ಎರಡನೇ ಬಾರಿ. ಆದರೆ, ಈ ಬಾರಿ ಹೆಚ್ಚಳ ತೀರಾ ದುಬಾರಿಯಲ್ಲ. ಅದು ಗರಿಷ್ಠ 10 ರೂ. ಮಾತ್ರ.
ನಾಲ್ಕನೇ ದರ ನಿಗದಿ ಸಮಿತಿ ಶಿಫಾರಸಿನಂತೆ ಈ ವರ್ಷ ಮೇಯಲ್ಲಿ ದಿಲ್ಲಿ ಮೆಟ್ರೊ ರೈಲ್ ಕಾರ್ಪೊರೇಶನ್ ದರ ಏರಿಕೆ ಘೋಷಿಸಿತ್ತು. ಈ ದರ ಏರಿಕೆ ಮೊದಲ ಹಂತ 2017 ಮೇಯಲ್ಲಿ ಅಸ್ತಿತ್ವಕ್ಕೆ ಬಂತು. ಎರಡನೇ ಹಂತದ ದರ ಏರಿಕೆ ಅಕ್ಟೋಬರ್‌ನಲ್ಲಿ ಅಸ್ತಿತ್ವಕ್ಕೆ ಬರಲಿದೆ.
Next Story





