ಮೂಡಿಗೆರೆ ಪಟ್ಟಣದಲ್ಲಿ ಹದಗೆಟ್ಟ ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ

ಚಿಕ್ಕಮಗಳೂರು, ಸೆ.25: ಕುವೆಂಪು ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಟೇಕ್ವಾಂಡೋ ಸ್ಪರ್ಧೆಯಲ್ಲಿ ನಗರದ ಐಡಿಎಸ್‍ಜಿ ಸರ್ಕಾರಿ ಕಾಲೇಜು ತಂಡವು ಚಾಂಪಿಯನ್ ಆಗಿ ಮೂಡಿಬಂದಿದೆ ಎಂದು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಿ.ಯೋಗೀಶ್ ತಿಳಿಸಿದ್ದಾರೆ.
ಶಿವಮೊಗ್ಗದ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಸಹಯೋಗದೊಂದಿಗೆ ಕುವೆಂಪು ವಿ.ವಿ. ಇತ್ತೀಚೆಗೆ ಶಿವಮೊಗ್ಗ ಕ್ರೀಡಾಂಗಣದಲ್ಲಿ ಟೇಕ್ವಾಂಡೋ ಸ್ಪರ್ಧೆಗಳನ್ನು ಆಯೋಜಿಸಿತ್ತು. ಐಡಿಎಸ್‍ಜಿ ವಿದ್ಯಾರ್ಥಿಗಳು ಅತಿಹೆಚ್ಚು ಅಂಕ-ಬಹುಮಾನ ಗಳಿಸುವ ಮೂಲಕ 3ನೆ ವರ್ಷವೂ ಚಾಂಪಿಯನ್ ಶಿಪ್ ತನ್ನದಾಗಿಸಿಕೊಂಡಿದೆ.
54ಕೆಜಿ ವಿಭಾಗದಲ್ಲಿ ದ್ವಿತೀಯ ಬಿಕಾಂ ವಿದ್ಯಾರ್ಥಿ ಎ.ಯೋಗಾನಂದ ಅಗ್ರಸ್ಥಾನ ಗಳಿಸಿ ಬಂಗಾರದ ಪದಕ ಪಡೆದಿದ್ದಾರೆ. 58 ಕೆಜಿ ವಿಭಾಗದಲ್ಲಿ ಪ್ರಥಮ ಬಿ.ಕಾಂ.ನ ಉದಯಪ್ರಸಾದ್ 3ನೆ ಸ್ಥಾನದೊಂದಿಗೆ ಕಂಚಿನಪದಕ ಪಡೆದರು. 74 ಕೆಜಿ ವಿಭಾಗದಲ್ಲಿ ಪ್ರಥಮ ಎಂಎಸ್ಸಿ ಪ್ರಾಣಿಶಾಸ್ತ್ರ ವಿಭಾಗದ ಕೆ.ಅಭಿಷೇಕ್ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಗಳಿಸಿದರು. 63 ಕೆಜಿ ವಿಭಾಗದಲ್ಲಿ ದ್ವಿತೀಯ ಬಿ.ಕಾಂ. ವಿದ್ಯಾರ್ಥಿಗಳಾದ ಐ.ಎಂ.ಸಂದೇಶ್ ಪ್ರಥಮಸ್ಥಾನಗಳಿಸಿ ಬಂಗಾರದ ಪದಕ ಮತ್ತು ಇರ್ಫಾನ್ 2ನೆ ಸ್ಥಾನ ಗಳಿಸಿ ಬೆಳ್ಳಿಪದಕ ತಮ್ಮದಾಗಿಸಿಕೊಂಡರು. 68 ಕೆಜಿ ವಿಭಾಗದಲ್ಲಿ ಪ್ರಥಮ ಬಿಕಾಂನ ಎಸ್.ಸುರೇಶ್ ಮತ್ತು 80 ಕೆಜಿ ವಿಭಾಗದಲ್ಲಿ ದ್ವಿತೀಯ ಬಿಕಾಂನ ಎಚ್.ಸಿ.ಸಚಿನ್ 3ನೆ ಸ್ಥಾನದೊಂದಿಗೆ ಕಂಚಿನ ಪದಕ ಪಡೆದರು.
ಪಂಜಾಬಿನ ಗುರುನಾನಕ್ ದೇವ ವಿಶ್ವವಿದ್ಯಾನಿಲಯದಲ್ಲಿ ನಡೆಯುವ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಐಡಿಎಸ್‍ಜಿ ಕಾಲೇಜಿನ ವಿದ್ಯಾರ್ಥಿಗಳಾದ ಎ.ಯೋಗಾನಂದ(54 ಕೆಜಿ), ಐ.ಎಂ.ಸಂದೇಶ್(63ಕೆ.ಜಿ) ಮತ್ತು ಕೆ.ಅಭಿಷೇಕ್ 74ಕೆ.ಜಿ. ವಿಭಾಗದ ಟೇಕ್ವಾಂಡೋ ಸ್ಪರ್ಧೆಯಲ್ಲಿ ಕುವೆಂಪು ವಿವಿಯನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದಾರೆ.
ವಿಜೇತ ವಿದ್ಯಾರ್ಥಿಗಳನ್ನು ಪ್ರಾಂಶುಪಾಲ ಪ್ರೊ.ಟಿ.ಸಿ. ಬಸವರಾಜು, ದೈಹಿಕಶಿಕ್ಷಣ ನಿರ್ದೇಶಕ ಬಿ.ಯೋಗೀಶ್ ಹಾಗೂ ಕ್ರೀಡಾಸಮಿತಿ ಸದಸ್ಯರು ಅಭಿನಂದಿಸಿದ್ದಾರೆ.







