ದಾಖಲೆ
![ದಾಖಲೆ ದಾಖಲೆ](https://www.varthabharati.in/sites/default/files/images/articles/2017/09/27/zlkkkhd.jpg)
ಅಲ್ಲೋ ಭಾರೀ ಗಲಭೆ. ದೊಂಬಿ.
ನೂರಾರು ನಿರಾಶ್ರಿತರು ಆ ನೆಲದಿಂದ ಗುಳೆ ಹೊರಟರು. ಎಲ್ಲ ಕಡೆಗಳಲ್ಲೂ ಬೇಲಿ. ನಿಲ್ಲುವುದಕ್ಕೆ ನೆಲೆಯೇ ಇಲ್ಲ. ಇನ್ನೊಂದು ದೇಶದ ಗಡಿಯ ಬಾಗಿಲು ತಟ್ಟಿದರು.
ಕಾವಲು ಭಟರು ‘‘ನೀವು ನಮ್ಮವರಲ್ಲ’’ ಎಂದರು.
‘‘ಇಲ್ಲ ನಾವೂ ನಿಮ್ಮವರೇ’’ ಅಂದರು.
‘‘ನಿಮ್ಮ ದಾಖಲೆಗಳನ್ನು ತೋರಿಸಿ’’ ಎಂದರು.
ಅವರು ತಮ್ಮ ಮಕ್ಕಳ ಕಣ್ಣಲ್ಲಿ ಹರಿಯುತ್ತಿರುವ ಕಣ್ಣೀರನ್ನು ತೋರಿಸಿದರು.
Next Story