ವಿದ್ಯುತ್ ತಂತಿ ತಗುಲಿ ಓರ್ವ ಮೃತ್ಯು
ಚಿಕ್ಕಮಗಳೂರು, ಸೆ.27: ಜೋಳದ ಗದ್ದೆ ಕಾಲವಿಗೆ ತೆರಳಿದ್ದವರೋರ್ವ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಮೃತಪಟ್ಟಿರುವ ಘಟನೆ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ಗೋಣಿಗೀಲಕಟ್ಟೆ ಗ್ರಾಮದ ರಾಮಸ್ವಾಮಿ(53) ಎಂದು ಗುರುತಿಸಲಾಗಿದೆ.
ರಾಮಸ್ವಾಮಿ ಅವರು ತಮ್ಮದೇ ಜಮೀನಿನಲ್ಲಿ ಒಣಗಿಸಲು ಹಾಕಿದ್ದ ಜೋಳವನು ರಾತ್ರಿ ಸಮಯದಲ್ಲಿ ಕಾಯಲು ತೆರಳಿದ್ದರು. ಬೆಳಗ್ಗೆ ಮನೆಗೆ ಮರಳಿ ಬರಲಿಲ್ಲವೆಂದು ಮನೆ ಮಂದಿ ಹೋಗಿ ಸ್ಥಳಕ್ಕೆ ಹೋಗಿ ನೋಡಿದಾಗ ಬೇಲಿಗೆ ಹಾಕಿದ್ದ ವಿದ್ಯುತ್ ತಂತಿ ಮೇಲೆ ಬಿದ್ದು ರಾಮಸ್ವಾಮಿಯವರ ಕುತ್ತಿಗೆಗೆ ತಗುಲಿ ಅವಘಡ ನಡೆದು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Next Story





