ಸೆ. 28: ‘ಸ್ವಾತಂತ್ರ ಮತ್ತು ಭಾತೃತ್ವ’ಕ್ಕಾಗಿ ಮೌನ ಮೆರವಣಿಗೆ
ಮಂಗಳೂರು, ಸೆ. 27: ನಗರದ ವಿವಿಧ ವಿದ್ಯಾರ್ಥಿ ಸಂಘಟನೆಗಳು ಸಮಾನ ಮನಸ್ಕ ಸಂಘಗಳ ಸಹಭಾಗಿತ್ವದಲ್ಲಿ ನಗರದಲ್ಲಿ ಸೆ. 28ರಂದು ‘ಸ್ವಾತಂತ್ರ ಮಾತ್ತು ಭಾತೃತ್ವ’ಕ್ಕಾಗಿ ಮೌನ ನಡಿಗೆಯನ್ನು ಆಯೋಜಿಸಲಾಗಿದೆ.
ದೇಶದಲ್ಲಿ ಇತ್ತೀಚೆಗೆ ನಡೆದ ಅಹಿತಕರ ಘಟನೆಗಳು, ಪ್ರಗತಿಪರರ ಹತ್ಯೆಗಳಿಂದ ಜನ ಸಮುದಾಯವು ತಲ್ಲಣಗೊಂಡಿರುವುದನ್ನು ಖಂಡಿಸಿ ಈ ಮೆರವಣಿಗೆ ಯನ್ನು ನಡೆಸಲಾಗುತ್ತಿದೆ. ಮಾತ್ರವಲ್ಲದೆ, ತಮ್ಮ ಧ್ವನಿಗಳನ್ನು ಆಲಿಸಲಾಗುತ್ತಿಲ್ಲ ಎಂಬುದರ ಸಂಕೇತವಾಗಿ ಮೆರವಣಿಗೆಯಲ್ಲಿ ಭಾಗವಹಿಸುವವರು ತಮ್ಮ ಬಾಯಿಯನ್ನು ಸಾಂಕೇತಿಕವಾಗಿ ಮುಚ್ಚಿಕೊಳ್ಳಲಿದ್ದಾರೆ ಎಂದು ಸಂಘಟಕರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈ ಮೆರವಣಿಗೆಯು ನಗರದ ಅಂಬೇಡ್ಕರ್ ವೃತ್ತದಿಂದ ಮಧ್ಯಾಹ್ನ 2.45ಕ್ಕೆ ಆರಂಭಗೊಳ್ಳಲಿದೆ. ಅಲ್ಲಿಂದ ಮೆರವಣಿಗೆಯು ಸಾಗಿ ನಗರದ ನೆಹರೂ ಮೈದಾನದಲ್ಲಿ ಸಂಜೆ 3.45ಕ್ಕೆ ಸಮಾವೇಶಗೊಂಡು ಪ್ರತಿಭಟನಾ ಸಭೆ ನಡೆಯಲಿದೆ.
ಸಭೆಯನ್ನುದ್ದೇಶಿಸಿ ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘದ ಕಾರ್ಯದರ್ಶಿ (ಎಐಪಿಡಬ್ಲುಎ) ಕವಿತಾ ಕೃಷ್ಣನ್ ಮಾತನಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.





