ಕೆರೆಯಲ್ಲಿ ಯುವಕನ ಶವ ಪತ್ತೆ
ಚಿಕ್ಕಮಗಳೂರು, ಸೆ.27: ಹಾಲು ತರಲು ಹೋಗಿ ನಾಪತ್ತೆಯಾಗಿದ್ದ ಯುವಕನೋರ್ವನ ಶವ ನೀರಿನಲ್ಲಿ ಪತ್ತೆಯಾಗಿರುವ ಘಟನೆ ಪಂಚನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮರವಂಜಿ ಗ್ರಾಮದಲ್ಲಿ ನಡೆದಿದೆ.
ಶವ ಪತ್ತೆಯಾದ ಯುವಕನನ್ನು ಮರವಂಜಿ ಗ್ರಾಮದ ಮನೋಜ್(17) ಗುರುತಿಸಲಾಗಿದೆ. ಈತ ಹಾಲು ತರಲು ತೆರಳಿದ್ದ. ಆದರೆ ಮರಳಿ ಬಾರದ ಹಿನ್ನೆಲೆಯಲ್ಲಿ ಹುಡುಕಾಡಿದಾಗ ಕಲ್ಲಿನಕಟ್ಟೆ ಕೆರೆಯಲ್ಲಿ ಶವ ಪತ್ತೆಯಾಗಿದೆ. ಈತ ಈಜಾಡಲು ತೆರಳಿ ಮುಳುಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
Next Story





