ಅ.2 ರಂದು ಗಾಂಧಿ ಗ್ರಾಮ ಪುರಸ್ಕಾರ: ಎಚ್.ಕೆ ಪಾಟೀಲ್

ಬೆಂಗಳೂರು ಸೆ.27: ಗಾಂಧಿ ಜಯಂತಿ ಅಂಗವಾಗಿ ರಾಜ್ಯದ 176 ಗ್ರಾಮ ಪಂಚಾಯತ್ ಗಳಿಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರದಾನಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ ಪಾಟೀಲ್ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪುರಸ್ಕಾರದ ಜೊತೆಯಲ್ಲಿ ಪ್ರತಿಯೊಂದು ಗ್ರಾಮ ಪಂಚಾಯತ್ ಗೂ ತಲಾ 5 ಲಕ್ಷ ರೂ. ಬಹುಮಾನ ನೀಡಲಾಗುತ್ತದೆ. ಜೊತೆಗೆ 1,863 ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯ 10,464 ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲಾಗುತ್ತದೆ. ಈ ಮೂಲಕ ರಾಜ್ಯದಲ್ಲಿ ಪೈಕಿ ಶೇ. 50 ರಷ್ಟು ಗ್ರಾಮ ಪಂಚಾಯತ್ ಗಳು ಬಯಲು ಬಹಿರ್ದೆಸೆ ಮುಕ್ತವಾಗಲಿವೆ ಎಂದರು.
ನವೆಂಬರ್ ಅಂತ್ಯದ ವೇಳೆಗೆ 100 ತಾಲೂಕುಗಳು ಬಯಲು ಬಹಿರ್ದೆಸೆ ಮುಕ್ತವಾಗಲಿವೆ. 2018ರ ಅಕ್ಟೋಬರ್ ತಿಂಗಳೊಳಗೆ ಇಡೀ ರಾಜ್ಯ ಬಯಲು ಬಹಿರ್ದೆಸೆ ಮುಕ್ತವಾಗಲಿದೆ. ಹೈದರಾಬಾದ್ ಕರ್ನಾಟಕದ ಕೆಲವು ಜಿಲ್ಲೆಗಳನ್ನು ಹೊರತು ಪಡಿಸಿದ್ದರೆ ರಾಜ್ಯದ ಬಹುತೇಕ ಜಿಲ್ಲೆಗಳು ಶೇ. 50ಕ್ಕಿಂತ ಹೆಚ್ಚು ಗುರಿ ಸಾಧಿಸಿವೆ ಎಂದು ತಿಳಿಸಿದರು.
Next Story





