ವಿಟ್ಲ: ರೋಟರಿ ಸೌಹಾರ್ದ ಈದ್ ಮಿಲನ್

ವಿಟ್ಲ, ಸೆ. 27: ಹಬ್ಬಗಳು ಎಲ್ಲಾ ಧರ್ಮಗಳಲ್ಲಿವೆ. ವೈವಿಧ್ಯಮಯ ಧರ್ಮ ಸಿದ್ಧಾಂತಗಳಲ್ಲಿ ನಾವು ಬದುಕುತ್ತಾ ಪರಸ್ಪರ ಸಂತೋಷದಿಂದ ಹಬ್ಬಗಳನ್ನು ಆಚರಿಸುತ್ತೇವೆ. ಹಬ್ಬಗಳು ಮನರಂಜನೆಗಳಿಗೆ ಸೀಮಿತವಾಗದೆ ಧಾರ್ಮಿಕ ಹಿನ್ನೆಲೆಯೊಂದಿಗೆ ಅರ್ಥಪೂರ್ಣವಾಗಿರಬೇಕು. ಪ್ರೀತಿ ವಿಶ್ವಾಸದಿಂದ ಪರಸ್ಪರ ಬೆರೆಯಬೇಕು. ಮನಸ್ಸುಗಳನ್ನು ಬೆಸೆಯಬೇಕು ಎಂದು ದ.ಕ. ಜಿಲ್ಲಾ ಎಸ್ಸೆಸ್ಸೆಫ್ ಅಧ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನ ಹೇಳಿದರು.
ಅವರು ಬುಧವಾರ ಸಂಜೆ ವಿಟ್ಲ ರೋಟರಿ ಕ್ಲಬ್ ವತಿಯಿಂದ ಬೊಬ್ಬೆಕ್ಕೇರಿ ಗಜಾನನ ಸಭಾಭವನದಲ್ಲಿ ನಡೆದ 'ಈದ್ ಮಿಲನ್' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ಸಂಜೀವ ಎಂ. ಅಧ್ಯಕ್ಷತೆ ವಹಿಸಿದ್ದರು. ರೋಟರಿ ವಲಯ ಸೇನಾಧಿಕಾರಿ ಲಾರೆನ್ಸ್ ಗೋನ್ಸಾಲ್ವಿಸ್ ಪುತ್ತೂರು, ನಿಕಟ ಪೂರ್ವಾಧ್ಯಕ್ಷ ವಸಂತ ಶೆಟ್ಟಿ, ಕಾರ್ಯದರ್ಶಿ ಪ್ರಕಾಶ್ ನಾಯಕ್, ರೋಟರಿ ನಿಯೋಜಿತ ಜಿಲ್ಲಾ ಕಾರ್ಯಕ್ರಮಗಳ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಜಿಎಸ್ಆರ್ ಜಯಕುಮಾರ್ ರೈ, ಅಡ್ವಕೇಟ್ ಶಾಕಿರ್ ಹಾಜಿ ಪುತ್ತೂರು, ಅಬ್ದುಲ್ ರಹಿಮಾನ್ ಪುತ್ತೂರು, ಸ್ಥಾಪಕಾಧ್ಯಕ್ಷ ಭಾಸ್ಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸ್ಥಾಪಕ ಕಾರ್ಯದರ್ಶಿ ರಶೀದ್ ವಿಟ್ಲ ಸ್ವಾಗತಿಸಿದರು. ಪೂರ್ವಾಧ್ಯಕ್ಷ ಡಿ.ಬಿ. ಅಬೂಬಕರ್ ಅತಿಥಿ ಪರಿಚಯ ಮಾಡಿದರು. ಎಸ್.ಎ. ರಹಿಮಾನ್ ವಂದಿಸಿದರು. ಅಶ್ರಫ್ ಒಕ್ಕೆತ್ತೂರು ನಿರೂಪಿಸಿದರು. ಪಿ.ಕೆ. ಶೆಟ್ಟಿ ಪ್ರಾರ್ಥಿಸಿದರು.







