ಸೊತ್ತು ಕಳವು ಪ್ರಕರಣ: ಆರೋಪಿ ಸೆರೆ

ಮಂಗಳೂರು, ಸೆ.27: ನಗರ ಹೊರವಲಯದ ಜೋಕಟ್ಟೆ ಬಳಿ ಹೊರ ರಾಜ್ಯದ ಕಾರ್ಮಿಕರು ವಾಸವಿರುವ ಅಪಾರ್ಟ್‌ಮೆಂಟ್‌ನಿಂದ 43 ಸಾವಿರ ರೂ. ಮೌಲ್ಯದ ಸೊತ್ತು ಕಳವು ಮಾಡಿದ ಆರೋಪಿಯನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.
ಕಸ್ಬಾ ಬೆಂಗರೆಯ ಎಂಎಸ್ ಶಾಪ್ ಬಳಿಯ ನಿವಾಸಿ ಮುಹಮ್ಮದ್ ಫೈರೋಝ್ (20) ಬಂಧಿತ ಆರೋಪಿ. ಈತನನ್ನು ತಣ್ಣೀರುಬಾವಿ ಬಳಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳ್ಳತನ ಮಾಡಿದ 28 ಸಾವಿರ ರೂ.ಮೌಲ್ಯದ ಮೊಬೈಲ್‌ಗಳು ಮತ್ತು 3,200 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಸೆ.20ರಂದು ಅಪಾರ್ಟ್‌ಮೆಂಟ್‌ನ ನೆಲ ಮಹಡಿಯಲ್ಲಿರುವ ಕೊಠಡಿಗೆ ನುಗ್ಗಿದ ಈತ 30 ಸಾವಿರ ರೂ. ಮೌಲ್ಯದ ಮೊಬೈಲ್ ಫೋನ್‌ಗಳು, 13 ಸಾವಿರ ರೂ. ನಗದು ಹಾಗೂ ಎಟಿಎಂ ಕಾರ್ಡ್ ಸೇರಿದಂತೆ 43 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ ಬಗ್ಗೆ ಪ್ರಕರಣ ದಾಖಲಾಗಿತ್ತು.
ಪಣಂಬೂರು ಇನ್‌ಸ್ಪೆಕ್ಟರ್ ರಫೀಕ್ ಕೆ.ಎಂ, ಕ್ರೈಂ ಎಸ್ಸೈ ಕುಮರೇಶನ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Next Story





