ಮೂಡಿಗೆರೆ: ಸೆ.30 ರಂದು 'ನದಿ ಉಳಿಸಿ' ರಸ್ತೆ ಜಾಥಾ

ಮೂಡಿಗೆರೆ, ಸೆ.27: ನದಿ ಪಾತ್ರ ಉಳಿಸಲು ರ್ಯಾಲಿ ಫಾರ್ ರಿವರ್ ಎಂಬ ಹೆಸರಿನಲ್ಲಿ ದೇಶದ್ಯಾಂತ ರಸ್ತೆ ಜಾಥಾ ನಡೆಯುತ್ತಿದ್ದು, ಇದರ ಅಂಗವಾಗಿ ಸೆ.30 ರಂದು ಮೂಡಿಗೆರೆಯಲ್ಲಿ ಕಾಲ್ನಡಿಗೆ ಜಾಥವನ್ನು ಹಮ್ಮಿಕೊಂಡಿದೆ ಎಂದು ಸಂಸ್ಥೆಯ ಸುವಾಸ್ ಹ್ಯಾರಗುಡ್ಡೆ ಹೇಳಿದರು.
ಮೂಡಿಗೆರೆ ಪಟ್ಟಣದಲ್ಲಿ ಈ ಕುರಿತು ಕರಪತ್ರ ಹಂಚಿ ಮಾತನಾಡಿದ ಅವರು, ಚಿಕ್ಕಮಗಳೂರು ಮತ್ತು ಸಕಲೇಶಪುರಗಳಿಂದ ಬೈಕ್ ಮತ್ತು ಕಾರುಗಳಲ್ಲಿ ಜಾಥಾ ಬರಲಿದೆ. ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಇಶಾ ಪೌಂಡೇಶನ್ ಅರುಣಿಮಾ ಮುಖ್ಯ ಭಾಷಣಕಾರರಾಗಿದ್ದು, ಸರ್ಕಾರಗಳ ತುರ್ತು ಕ್ರಮದಿಂದ ಮಾತ್ರ ನದಿ ಪಾತ್ರ ಉಳಿಸಲು ಸಾಧ್ಯ ಎಂದು ತಿಳಿಸಿದರು.
ಸಂಸ್ಥೆಯ ವಿವೇಕ್ ಪುಣ್ಯಮೂರ್ತಿ ಮಾತನಾಡಿ, ಈ ಕಾರಣದಿಂದ ಜಾಥಾದಲ್ಲಿ ಸರ್ಕಾರಿ ಭೂಮಿಗಳಲ್ಲಿ ಕಾಡನ್ನು ಕಡ್ಡಾಯವಾಗಿ ಬೆಳೆಸಬೇಕು. ಕೃಷಿ ಭೂಮಿಯಲ್ಲಿ ಹಣ್ಣಿನ ಗಿಡಗಳನ್ನು ರೈತರು ಬೆಳೆಯುವಂತೆ ಪ್ರೋತ್ಸಾಹ ನೀಡಬೇಕು. ಮತ್ತು ನದಿ ಪಾತ್ರದ 1 ಕಿ.ಮೀ. ವ್ಯಾಪ್ತಿಯಲ್ಲಿ ಮರಗಳ ಹೊದಿಕೆ ನಿಮಾಣ ಮಾಡಬೇಕು. ಇದು ಜಾಥಾದ ಪ್ರಮುಖ ಅಶಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಭರತ್ ಮಡ್ಡಿಕೆರೆ, ಸತ್ಯಪ್ಪ, ಮೊಹಮ್ಮದ್ ಅಸಿಮ್ ಅಲ್ದೂರು, ಪುೃಥ್ವಿ ಗೌತಹಳ್ಳಿ, ಜಯರಾಮ್ ದೇವೃಂಧ, ದೀಪಕ್ ದೇವೃಂದ, ಶಿವರಾಜ್, ನಂದೀಶ್ ಉಪಸ್ಥಿತರಿದ್ದರು.







