ವರುಣನ ಆರ್ಭಟ: ಬೆಂಗಳೂರು, ಮೈಸೂರು ತತ್ತರ
ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ತಡರಾತ್ರಿ ಸುರಿದ ದಾಖಲೆ ಮಳೆಯಿಂದಾಗಿ ಇಬ್ಬರು ಮೃತಪಟ್ಟರೆ, ಎಲ್ಲೆಡೆ ನೀರು ನುಗ್ಗಿ ಸಾಕಷ್ಟು ಅನಾಹುತ ಸಂಭವಿಸಿದ್ದು, ಜನಜೀವನ ತತ್ತರಗೊಂಡಿದೆ. ಮೈಸೂರಿನಲ್ಲೂ ನಗರದ ತಗ್ಗು ಪ್ರದೇಶದ ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿ ಅನಾಹುತ ಸೃಷ್ಟಿಸಿದೆ. ನೆರೆಪೀಡಿತ ಪ್ರದೇಶಗಳ ಹಲವರನ್ನು ಬೋಟ್‌ಗಳ ಸಹಾಯದಿಂದ ಅಗ್ನಿಶಾಮಕದಳ ರಕ್ಷಿಸಿದೆ. ಜೊತೆಗೆ ಹಲವು ಪ್ರಮುಖ ಬಡಾವಣೆಗಳ ಮುಖ್ಯ ರಸ್ತೆಗಳಲ್ಲಿ ಭಾರೀ ಗಾತ್ರದ ಮರಗಳು ಧರೆಗುರುಳಿದ್ದು, ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಗಿ, ಜನಜೀವನ ಅಸ್ತವ್ಯಸ್ತಗೊಂಡಿದೆ.
Next Story





