ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 150 ವಿಕೆಟ್ ಪಡೆದ ಮೊದಲ ಸ್ಪಿನ್ನರ್ ಯಾಸಿರ್ ಶಾ

ಅಬುಧಾಬಿ, ಸೆ.28: ಪಾಕಿಸ್ತಾನದ ಯಾಸಿರ್ ಶಾ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗವಾಗಿ 150 ಟೆಸ್ಟ್ ವಿಕೆಟ್‌ಗಳನ್ನು ಪೂರೈಸಿದ ಮೊದಲ ಸ್ಪಿನ್ನರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಶ್ರೀಲಂಕಾ ವಿರುದ್ಧ ಗುರುವಾರ ಇಲ್ಲಿ ಆರಂಭವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಶಾ ತನ್ನ 27ನೆ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದರು.
ಅತ್ಯಂತ ವೇಗವಾಗಿ 150 ವಿಕೆಟ್ ಪೂರೈಸಿರುವ ದಾಖಲೆ ಇಂಗ್ಲೆಂಡ್‌ನ ವೇಗಿ ಸಿಡ್ನಿ ಬಾರ್ನೆಸ್ ಹೆಸರಲ್ಲಿದೆ. ಬಾರ್ನೆಸ್ ಕೇವಲ 24 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಶಾ ಅತ್ಯಂತ ವೇಗವಾಗಿ 150 ವಿಕೆಟ್ ಪಡೆದ ಎರಡನೆ ಬೌಲರ್ ಎಂಬ ದಾಖಲೆಯನ್ನು ಪಾಕ್‌ನ ಮಾಜಿ ವೇಗದ ಬೌಲರ್ ವಕಾರ್ ಯೂನಿಸ್‌ರೊಂದಿಗೆ ಹಂಚಿಕೊಂಡರು. ಯೂನಿಸ್ ಕೂಡ 27 ಟೆಸ್ಟ್‌ಗಳಲ್ಲಿ 150 ವಿಕೆಟ್ ಮೈಲುಗಲ್ಲು ತಲುಪಿದ್ದರು. ಸ್ಪಿನ್ನರ್‌ಗಳ ಪೈಕಿ ಆಸ್ಟ್ರೇಲಿಯದ ಗ್ರಿಮ್ಮೆಟ್ ಕೇವಲ 28 ಪಂದ್ಯಗಳಲ್ಲಿ 150 ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಈ ಸಾಧನೆಯನ್ನು ಯಾಸಿರ್ ಮುರಿದಿದ್ದಾರೆ. ಯಾಸಿರ್ ತಮ್ಮದೇ ದೇಶದ ಸಯೀದ್ ಅಜ್ಮಲ್ ದಾಖಲೆಯನ್ನು ಮುರಿದರು. ಅಜ್ಮಲ್ 29 ಪಂದ್ಯಗಳಲ್ಲಿ 150 ವಿಕೆಟ್‌ಗಳನ್ನು ಪಡೆದಿದ್ದರು.
ಮೊದಲ ಟೆಸ್ಟ್‌ನ ಮೊದಲ ದಿನದಾಟದಲ್ಲಿ ಶ್ರೀಲಂಕಾದ ಲಹಿರು ತಿರಿಮನ್ನೆ ವಿಕೆಟ್ ಪಡೆಯುವುದರೊಂದಿಗೆ ಯಾಸಿರ್ 150 ವಿಕೆಟ್‌ಗಳನ್ನು ಪೂರೈಸಿದರು.
ಐಸಿಸಿ ತನ್ನ ಅಧಿಕೃತ ಟ್ವಿಟ್ಟರ್‌ನಲ್ಲಿ ಅತ್ಯಂತ ವೇಗವಾಗಿ 150 ವಿಕೆಟ್ ಮೈಲುಗಲ್ಲು ತಲುಪಿರುವ ಯಾಸಿರ್‌ಗೆ ಅಭಿನಂದನೆ ಸಲ್ಲಿಸಿದೆ.
ಇತ್ತೀಚೆಗೆ ಪಿಸಿಬಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವರ್ಷದ ಟೆಸ್ಟ್ ಕ್ರಿಕೆಟಿಗ ಗೌರವಕ್ಕೆ ಪಾತ್ರರಾಗಿರುವ ಯಾಸಿರ್ ಪ್ರಸ್ತುತ ಐಸಿಸಿ ಟೆಸ್ಟ್ ಬೌಲಿಂಗ್ ರ್ಯಾಂಕಿಂಗ್‌ನಲ್ಲಿ 15ನೆ ಸ್ಥಾನದಲ್ಲಿದ್ದಾರೆ.
ಟೆಸ್ಟ್‌ನಲ್ಲಿ ವೇಗವಾಗಿ 150 ವಿಕೆಟ್ ಪಡೆದ ಬೌಲರ್‌ಗಳು
ಬೌಲರ್ ತಂಡ ಪಂದ್ಯಗಳು
ಸಿಡ್ನಿ ಬಾರ್ನೆಸ್ ಇಂಗ್ಲೆಂಡ್ 24
ವಕಾರ್‌ಯೂನಿಸ್ ಪಾಕಿಸ್ತಾನ 27
ಯಾಸಿರ್ ಶಾ ಪಾಕಿಸ್ತಾನ 27
ಕ್ಲಾರ್ರಿ ಗ್ರಿಮ್ಮೆಟ್ ಆಸ್ಟ್ರೇಲಿಯ 28
ಹ್ಯೂಗ್ ಟೇಫೀಲ್ಡ್ ದಕ್ಷಿಣ ಆಫ್ರಿಕ 29







