ಮಹಿಳೆಯನ್ನು ಅಪಹರಿಸಿ ಅತ್ಯಾಚಾರಗೈದ 23 ಮಂದಿಯ ತಂಡ: ಆರೋಪ

ಹೊಸದಿಲ್ಲಿ, ಸೆ.28: ಬಿಕನೇರ್ ನಿಂದ ತನ್ನನ್ನು ಅಪಹರಿಸಿದ 23 ಮಂದಿಯ ತಂಡ ತನ್ನ ಮೇಲೆ ಅತ್ಯಾಚಾರ ಎಸಗಿದೆ ಎಂದು ದಿಲ್ಲಿಯ ಮಹಿಳೆಯೋರ್ವರು ಆರೋಪಿಸಿದ್ದಾರೆ.
ಸೆಪ್ಟಂಬರ್ 25ರಂದು ತಾನು ಬಿಕನೇರ್ ಗೆ ತೆರಳಿದ್ದೆ. ಅಲ್ಲಿಂದ ಹಿಂತಿರುಗುತ್ತಿದ್ದ ಸಂದರ್ಭ ಕಾರಿನಲ್ಲಿ ಆಗಮಿಸಿದ ಇಬ್ಬರು ನನ್ನನ್ನು ಅಪಹರಿಸಿದರು. ನಂತರ ವಾಹನದಲ್ಲೇ ನನ್ನ ಮೇಲೆ ಅತ್ಯಾಚಾರ ಎಸಗಿದರು. ನಂತರ ಅವರು ಇತರ ಆರು ಮಂದಿಯನ್ನು ಕರೆದರು. ಅವರು ಕೂಡ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದರು. ನಂತರ ಪಲಾನಾ ಗ್ರಾಮಕ್ಕೆ ನನ್ನನ್ನು ಕರೆದೊಯ್ದು ಅಲ್ಲಿದ್ದ ಹಲವರು ನನ್ನ ಮೇಲೆ ಅತ್ಯಾಚಾರ ನಡೆಸಿದರು” ಎಂದು ಮಹಿಳೆ ಆರೋಪಿಸಿದ್ದಾರೆ.
ಇಬ್ಬರು ವ್ಯಕ್ತಿಗಳು ಆಕೆಯನ್ನು ಅಪಹರಿಸಿದ್ದ ಸ್ಥಳದಲ್ಲೇ ಮತ್ತೆ ಬಿಟ್ಟಿದ್ದಾರೆ ಎಂದು ಎಫ್ ಐಆರ್ ನಲ್ಲಿ ದಾಖಲಿಸಲಾಗಿದೆ. 21 ಅಪರಿಚಿತರು ಸೇರಿದಂತೆ 23 ಮಂದಿಯ ವಿರುದ್ಧ ಪ್ರಕರಣದ ದಾಖಲಿಸಲಾಗಿದೆ.
ಮ್ಯಾಜಿಸ್ಟ್ರೇಟ್ ಮುಂದೆ ಮಹಿಳೆ ಹೇಳಿಕೆ ನೀಡಿದ್ದಾರೆ. ಎಫ್ ಐಆರ್ ನಲ್ಲಿರುವ ಎಲ್ಲಾ ವಿಚಾರಗಳನ್ನು ಅವರು ತಿಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ರಾಜೇಂದ್ರ ಸಿಂಗ್ ತಿಳಿಸಿದ್ದಾರೆ.





