ಸೆ. 29ರಂದು ಉಪ್ಪಿನಂಗಡಿಯಲ್ಲಿ ಸಣ್ಣ ವ್ಯಾಪಾರದ ಬಗ್ಗೆ ಉಚಿತ ತರಬೇತಿ

ಮಂಗಳೂರು, ಸೆ. 28: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಸಣ್ಣ ವ್ಯಾಪಾರದ ಬಗ್ಗೆ ಉಚಿತ ತರಬೇತಿ ಕಾರ್ಯಕ್ರಮವು ಸೆ. 29ರಂದು ಅಪರಾಹ್ನ 2:30 ರಿಂದ 6ಯವರೆಗೆ ಉಪ್ಪಿನಂಗಡಿಯ ಸರಕಾರಿ ಮಾದರಿ ಹಿ.ಪ್ರಾ.ಶಾಲೆಯಲ್ಲಿ ನಡೆಯಲಿದೆ.
ಫುಟ್‌ಪಾತ್, ಮಾರ್ಕೆಟ್, ಬಸ್ ನಿಲ್ದಾಣ, ರೈಲ್ವೇ ಸ್ಟೇಷನ್, ಸಂತೆ, ಜಾತ್ರೆ, ಉರೂಸ್, ಮಸೀದಿಯ ಹೊರಗೆ ಹೀಗೆ ಜನ ಸೇರುವ ಜಾಗದಲ್ಲಿ ಕಡಿಮೆ ಬಂಡವಾಳ ಹಾಕಿ ಮಾಡಬಹುದಾದ ಸಣ್ಣ ವ್ಯಾಪಾರದ ಬಗ್ಗೆ ಉಚಿತ ತರಬೇತಿಯನ್ನು ನಡೆಸುತ್ತಿದ್ದೇವೆ. ಈ ಕಾರ್ಯಕ್ರಮದಲ್ಲಿ ವ್ಯಾಪಾರ ಮಾಡಬಹುದಾದ ವಸ್ತುಗಳನ್ನು ತೋರಿಸಲಾಗುವುದು. ವಸ್ತುಗಳು ಹೋಲ್ ಸೇಲ್ ದರದಲ್ಲಿ ಸಿಗುವ ಸ್ಥಳ, ವ್ಯಾಪಾರದಲ್ಲಿ ಸಿಗಬಹುದಾದ ಅಂದಾಜು ಲಾಭ ಮುಂತಾದ ವಿಷಯಗಳಲ್ಲಿ ಅನುಭವಿ ತರಬೇತುದಾರರು ತರಬೇತಿ ನೀಡಲಿದ್ದಾರೆ.
ಈ ತರಬೇತಿಯು ಸಣ್ಣ ವ್ಯಾಪಾರಸಕ್ತರಿಗೆ ಬಹಳಷ್ಟು ಪ್ರಯೋಜನವಾಗಲಿದ್ದು ಆಸಕ್ತರು ಇದರ ಪ್ರಯೋಜನ ಪಡೆಯುವಂತೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಿ. ಅಬ್ದುಲ್ ಹಮೀದ್ ಕಣ್ಣೂರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ- 9972283365, 7760508664





