ಕೌಟುಂಬಿಕ ಕಲಹ: ತನ್ನ ಮಗನಿಗೆ ನೇಣು ಹಾಕಿ ತಾನು ಆತ್ಮಹತ್ಯೆಗೆ ಶಾರಣಾದ ತಂದೆ
ಜಗಳೂರು, ಸೆ.28: ಕೌಟುಂಬಿಕ ಜಗಳದಿಂದ ಬೇಸತ್ತ ವ್ಯಕ್ತಿಯೊಬ್ಬ ತನ್ನ ಮಗನಿಗೆ ನೇಣು ಹಾಕಿ ಕೊಲೆ ಮಾಡಿ, ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಉಚ್ಚಂಗಿಪುರ ಗ್ರಾಮದಲ್ಲಿ ಗುರುವಾರ ನಡೆದಿದೆ.
ಉಚ್ಚಂಗಿಪುರ ಗ್ರಾಮದ ರೇವಣ ಸಿದ್ದಪ್ಪ (38 ವರ್ಷ) ತನ್ನ ಮಗ ಶಿವಕುಮಾರ (8ವರ್ಷ)ನನ್ನು ಕೊಲೆ ಮಾಡಿ, ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ.
ರೇವಣ ಸಿದ್ದಪ್ಪ ತನ್ನ ಹಿರಿಯ ಮಗ ಶಿವಕುಮಾರನಿಗೆ ನೇಣು ಹಾಕಿದ ಬಳಿಕ ಮತ್ತೊಬ್ಬ 5 ವರ್ಷದ ಮಗ ಮನು ಕೊಲೆಗೂ ಪ್ರಯತ್ನಿಸಿದ್ದಾನೆ. ಆದರೆ ಮನು ಪ್ರಾಣಾಪಾಯದಿಂದ ಪಾರಾಗಿದ್ದು, ಬಳಿಕ ರೇವಣಸಿದ್ದಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೊಲೆ, ಆತ್ಮಹತ್ಯೆಗೆ ಕೌಟುಂಬಿಕ ಕಲಹ ಕಾರಣವೆಂದು ಹೇಳಲಾಗಿದೆ.
ಘಟನೆ ತಿಳಿದ ಜಗಳೂರು ವೃತ್ತ ನಿರೀಕ್ಷಕರು, ಬಿಳಿ ಚೋಡು ಸಬ್ ಇನ್ ಸ್ಪೆಕ್ಟರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದರು.
ಈ ಬಗ್ಗೆ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





