ಜಪಾನ್: ಮಧ್ಯಾಂತರ ಚುನಾವಣೆಗಾಗಿ ಕೆಳಮನೆ ವಿಸರ್ಜನೆ

ಟೋಕಿಯೊ, ಸೆ. 28: ಮಧ್ಯಾಂತರ ಚುನಾವಣೆ ನಡೆಸಲು ಸಾಧ್ಯವಾಗುವಂತೆ ಜಪಾನ್ ಪ್ರಧಾನಿ ಶಿಂಝೊ ಅಬೆ ಗುರುವಾರ ಸಂಸತ್ತಿನ ಕೆಳಮನೆಯನ್ನು ವಿಸರ್ಜಿಸಿದ್ದಾರೆ. ಚುನಾವಣೆ ಅಕ್ಟೋಬರ್ 22ರಂದು ನಡೆಯುವ ಸಾಧ್ಯತೆಯಿದೆ.
ಸದನದ ಸ್ಪೀಕರ್ ಟಡಮೊರಿ ಒಶಿಮ ಸದನವನ್ನು ವಿಸರ್ಜಿಸುವುದಕ್ಕೆ ಸಂಬಂಧಿಸಿದ ಹೇಳಿಕೆಯನ್ನು ಓದಿದರು. ಸದಸ್ಯರು ಎದ್ದು ನಿಂತು ಸಂಪ್ರದಾಯದಂತೆ ‘ಬಂಝೈ’ ಎಂಬುದಾಗಿ ಮೂರು ಬಾರಿ ಉಚ್ಚರಿಸಿದರು ಹಾಗೂ ಬಳಿಕ ಸದನದಿಂದ ಹೊರಗೆ ಧಾವಿಸಿದರು.
Next Story





