ಆಕಾಶ ಮಧ್ಯದಲ್ಲೇ ಮೃತಪಟ್ಟ ಪೈಲಟ್ !
ಕುವೈತ್, ಸೆ. 28: ಅಬುಧಾಬಿಯಿಂದ ಆ್ಯಮ್ಸ್ಟರ್ಡಾಂಗೆ ಹೋಗುತ್ತಿದ್ದ ಎತಿಹಾದ್ ಏರ್ವೇಸ್ನ ಸರಕು ವಿಮಾನವೊಂದರ ಪೈಲಟ್ ಹಾರಾಟದ ವೇಳೆ ಮೃತಪಟ್ಟ ಘಟನೆಯೊಂದು ವರದಿಯಾಗಿದೆ.
ಬಳಿಕ ತುರ್ತು ಪರಿಸ್ಥಿತಿ ಘೋಷಿಸಿದ ವಿಮಾನದ ಫಸ್ಟ್ ಆಫಿಸರ್ ಕುವೈತ್ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದರು.
ಅಬುಧಾಬಿಯಿಂದ ಹಾರಾಟ ಆರಂಭಿಸಿದ ಸ್ವಲ್ಪವೇ ಹೊತ್ತಿನಲ್ಲಿ ವಿಮಾನದ ಕ್ಯಾಪ್ಟನ್ (ಪೈಲಟ್) ಅಸ್ವಸ್ಥಗೊಂಡರು. ಕುವೈತ್ನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಯಿತಾದರೂ, ಅವರು ಮೃತಪಟ್ಟಿದ್ದಾರೆ ಎಂದು ಬಳಿಕ ಘೋಷಿಸಲಾಯಿತು.
ಅದು ಸರಕು ವಿಮಾನವಾದುದರಿಂದ ಬೇರೆ ಪ್ರಯಾಣಿಕರು ಇರಲಿಲ್ಲ.
Next Story