ಸಮುದ್ರ ಪಾಲಾಗುತ್ತಿದ್ದ ಯುವಕನ ರಕ್ಷಣೆ
ಮಂಗಳೂರು, ಸೆ.28: ನಗರದ ಹೊರ ವಲಯದ ಪಣಂಬೂರು ಸಮುದ್ರ ತೀರದಲ್ಲಿ ನೀರು ಪಾಲಾಗುತ್ತಿದ್ದ ಯುವಕನನ್ನು ಗುರುವಾರ ಪಣಂಬೂರು ಜೀವ ರಕ್ಷಕ ಪಡೆ ರಕ್ಷಿಸಿದೆ.
ಮೂಡಿಗೆರೆಯ ಆಸಿಮ್ ಸುಹೈಲ್ (25) ರಕ್ಷಿಸಲ್ಪಟ್ಟ ಯುವಕ. ಸಮುದ್ರ ತೀರಕ್ಕೆ ಬಂದಿದ್ದ ಸುಮಾರು 10 ಮಂದಿಯ ತಂಡವು ನೀರಿಗಿಳಿದಿತ್ತು. ಈ ಸಂದರ್ಭ ಬೃಹತ್ ಅಲೆಗೆ ಸಿಲುಕಿದ ಸುಹೈಲ್ ನೀರಲ್ಲಿ ಕೊಚ್ಚಿ ಹೋಗಿದ್ದ. ಜೊತೆಗಿದ್ದವರು ಕೂಗಿಕೊಂಡಾಗ ಅಲ್ಲಿದ್ದ ಜೀವ ರಕ್ಷಕ ಪಡೆಯು ತಕ್ಷಣ ಧಾವಿಸಿ ಬಂದು ಯುವಕನನ್ನು ರಕ್ಷಣೆ ಮಾಡಿದೆ ಎಂದು ತಿಳಿದು ಬಂದಿದೆ.
Next Story





