ಮೀನುಗಾರ ಸಮುದ್ರಪಾಲು
ಮಲ್ಪೆ, ಸೆ.28: ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರ ರೊಬ್ಬರು ಬೋಟಿನಿಂದ ನೀರಿಗೆ ಬಿದ್ದು ನಾಪತ್ತೆಯಾಗಿರುವ ಬಗ್ಗೆ ವರದಿ ಯಾಗಿದೆ.
ಸೆ.20ರಂದು ರಾತ್ರಿ ಮಲ್ಪೆಯ ನ್ಯೂ ಜಲಶಾಂತಿ ಎಂಬ ಬೋಟು ಮೀನು ಗಾರಿಕೆಗೆ ಮಲ್ಪೆಬಂದರಿನಿಂದ ಹೊರಟಿದ್ದು, ಸೆ.22ರಂದು ರಾತ್ರಿ ಬಂದರಿನಿಂದ 20 ಮಾರು ಆಳ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿರುವಾಗ ಬಲೆಯನ್ನು ಬಿಡುತ್ತಿದ್ದ ಮೋಹನ ಮೊಗೇರ(43) ಎಂಬವರು ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದು ನಾಪತ್ತಯಾದರು. ಬೋಟನಲ್ಲಿದ್ದ ಇತರರು ಹುಡುಕಾಟ ನಡೆಸಿದರೂ ಈವರೆಗೆ ಅವರು ಪತ್ತೆಯಾಗಿಲ್ಲ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story