ಗೋವಾದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ: ನೆರವಿಗೆ ಜಯ ಕರ್ನಾಟಕ ಆಗ್ರಹ

ಮುಂಡಗೋಡ, ಸೆ.28: ಕನ್ನಡಿಗರ ಮನೆಗಳನ್ನು ತೆರವು ಗೊಳಿಸಿರುವ ಗೋವಾ ಸರಕಾರದ ಕ್ರಮವನ್ನು ತಾಲೂಕ ಜಯ ಕರ್ನಾಟಕ ಸಂಘ ಖಂಡಿಸಿ, ಮನೆಗಳನ್ನು ಕಳೆದುಕೊಂಡಿರುವ ಕನ್ನಡಿಗರ ನೆರವಿಗೆ ಸಿಎಂ ಸಿದ್ದರಾಮಯ್ಯ ಬರುವಂತೆ ಆಗ್ರಹಿಸಿ ತಹಶೀಲ್ದಾರ್ ಮೂಲಕ ಮುಖ್ಯ ಮಂತ್ರಿಯವರಿಗೆ ಗುರವಾರ ಮನವಿ ಸಲ್ಲಿಸಿತು.
ಗೋವಾ ಸರಕಾರ ಕಳೆದ 3-4 ವರ್ಷದ ಹಿಂದೆ ಪರ್ಯಾಯ ವ್ಯವಸ್ಥೆ ಮಾಡದೇ ಬೈನಾ ಕಡಲ ತೀರದಲ್ಲಿರುವ 200ಕ್ಕೂ ಅಧಿಕ ಕನ್ನಡಿಗರ ಮನೆಗಳನ್ನು ಗೋವಾ ಸರಕಾರ ತೆರವು ಮಾಡಿತ್ತು ಕನ್ನಡಿಗರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಟ್ಟು ತೆರವು ಕಾರ್ಯಾಚರಣೆ ಮಾಡುವಂತೆ ಈ ಹಿಂದಿನಿಂದ ಆಗ್ರಹ ಮಾಡುತ್ತಾ ಬಂದಿದ್ದರೂ ಮಾತಿಗೆ ಕವಡೆ ಕಾಸಿನ ಕಿಮ್ಮುತ್ತು ಕೊಡದೇ ಮತ್ತೆ ಈಗ 54 ಮನೆಗಳನ್ನು ತೆರವು ಮಾಡಿದೆ ಇದು ನಿಜಕ್ಕೂ ಖಂಡನೀಯ.
54 ಮನೆಗಳನ್ನು ಕಳೆದುಕೊಂಡು ಬೀದಿ ಪಾಲಾಗಿರುವ ಕನ್ನಡಿಗರ ನೆರವಿಗೆ ರ್ನಾಟಕದ ಮುಖ್ಯಮಂತ್ರಿ ನೆರವಿಗೆ ಬಂದು ಖುದ್ದಾಗಿ ಗೋವಾ ಮುಖ್ಯಮಂತ್ರಿ ಜೋತೆ ಮಾತನಾಡಿ ಮನೆಗಳನ್ನು ಕಳೆದುಕೊಂಡ ಕನ್ನಡಿಗರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಲು ಕ್ರಮಕೈಗೊಳ್ಳಬೇಕು ಜೊತೆಗೆ ಗೋವಾದಲ್ಲಿರುವ ಕನ್ನಡಿಗರ ರಕ್ಷಣೆಗೆ ಮುಂದಾಗ ಬೇಕೆಂದು ಮನವಿಯಲ್ಲಿ ಜಯ ಕರ್ನಾಟಕ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಜಯ ಕರ್ನಾಟಕ ಅಧ್ಯಕ್ಷ ಪಾಂಡುರಂಗ ಪವಾರ, ತಾಲೂಕ ಸಂಚಾಲಕ ಕರಿಯಣ್ಣ ಪಾಟೀಲ, ಪ್ರಧಾನ ಕಾರ್ಯದರ್ಶಿ ಮುಸ್ತಾಕಅಲಿ ಲತೀಫನವರ, ಗೌರವ ಅಧ್ಯಕ್ಷ ಪ್ರಮೋದ ಸಣ್ಣಮನಿ, ಉಪಾಧ್ಯಕ್ಷ ಉಮೇಶ ಉಮ್ಮಣ್ಣನವರ, ಕಾರ್ಯಾಧ್ಯಕ್ಷರು ಚರಂತಯ್ಯ ಹಿರೇಮಠ, ಸಹಕಾರ್ಯದರ್ಶಿ ರವಿ ವಾಲ್ಮೀಕಿ, ಸದಸ್ಯರಾದ ಅರ್ಜುನ ಭೋವಿವಡ್ಡರ, ಮೌಲಾಲಿ ಕರ್ಜಗಿ, ಮಂಜುನಾಥ ಕಿಳ್ಳಿಕೇತರ, ಭೀಮರಾವ ಬನವಾಸಿ ಹಾಗೂ ವಿಠ್ಠಲ ಬಾಗಡಿ ಸೇರಿದಂತೆ ಮುಂತಾದವರು ಇದ್ದರು.







