ಸೆ.30: ಮೇಲ್ತೆನೆಯಿಂದ ಬ್ಯಾರಿ ಕವಿಗೋಷ್ಠಿ
ಮಂಗಳೂರು, ಸೆ.29: ದೇರಳಕಟ್ಟೆಯ ಬ್ಯಾರಿ ಲೇಖಕರು ಮತ್ತು ಕಲಾವಿದರ ಬಳಗ (ಮೇಲ್ತೆನೆ)ದ ವತಿಯಿಂದ ಸೆ.30ರಂದು ಮಗ್ರಿಬ್ ನಮಾಝ್ ಬಳಿಕ ಮಂಜನಾಡಿ ಗ್ರಾಮದ ಕಲ್ಕಟ್ಟ ಸರಕಾರಿ ಪ್ರೌಡಶಾಲೆಯಲ್ಲಿ ಬ್ಯಾರಿ ಕವನ ಮತ್ತು ಚುಟುಕುಗೋಷ್ಠಿ ನಡೆಯಲಿದೆ.
‘ಮೇಲ್ತೆನೆ’ಯ ಅಧ್ಯಕ್ಷ ಆಲಿಕುಂಞಿ ಪಾರೆ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ‘ಮೇಲ್ತೆನೆ’ ಬಳಗದ ಬಶೀರ್ ಅಹ್ಮದ್ ಕಿನ್ಯ, ಇಸ್ಮಾಯೀಲ್ ಟಿ., ನಿಯಾಝ್ ಪಿ. ಬಶೀರ್ ಕಲ್ಕಟ್ಟ, ಆರೀಫ್ ಕಲ್ಕಟ್ಟ, ರಫೀಕ್ ಪಾಣೇಲ ಕವನ ವಾಚಿಸಲಿದ್ದಾರೆ.
ಪತ್ರಕರ್ತ ಹಂಝ ಮಲಾರ್ ಮತ್ತು ಲೇಖಕ ಇಸ್ಮತ್ ಪಜೀರ್ ‘ಸಾಹಿತ್ಯ ಕಮ್ಮಟ’ ನಡಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





