ಪ್ರಿ- ಜಿಎಸ್ ಟಿ ಸರಕುಗಳ ಮಾರಾಟ ಗಡುವು ಡಿಸೆಂಬರ್ 31ರ ತನಕ ವಿಸ್ತರಣೆ

ಹೊಸದಿಲ್ಲಿ, ಸೆ.29: ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಜಾರಿಗೆ ಮುನ್ನ ಉತ್ಪಾದನೆಯಾಗಿರುವ ಸರಕುಗಳನ್ನು ಪರಿಷ್ಕೃತ ದರದಲ್ಲಿ ಮಾರಾಟ ಮಾಡುವ ಕಾಲಾವಧಿಯನ್ನು ಡಿಸೆಂಬರ್ 31ರ ತನಕ ವಿಸ್ತರಿಸಲಾಗಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಂ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.
ಜುಲೈ 1ರಂದು ಜಿಎಸ್ ಟಿ ಜಾರಿಯಾಗುವುದಕ್ಕಿಂತ ಮುನ್ನ ಉತ್ಪಾದಿಸಲಾದ ಸರಕುಗಳನ್ನು ಪರಿಷ್ಕೃತ ದರದೊಂದಿಗೆ ಮಾರಾಟಕ್ಕೆ ಈ ಹಿಂದೆ ಸೆಪ್ಟಂಬರ್ 30 ತನಕ ಅಂತಿಮ ಗಡುವು ವಿಧಿಸಲಾಗಿತ್ತು.
ಇದೀಗ ನಾನಾ ಸರಕುಗಳ ಉತ್ಪಾದಕ ಕಂಪೆನಿಗಳು ತಮ್ಮಲ್ಲಿರುವ ಜಿಎಸ್‌ಟಿ ಜಾರಿಗೆ ಮುನ್ನ ಮಾರಾಟವಾಗದೆ ಉಳಿದಿದ್ದ ಸರಕುಗಳ ದಾಸ್ತಾನನ್ನು ಖಾಲಿ ಮಾಡಲು ಕಾಲಾವಕಾಶ ಕೇಳಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ ನಿರ್ಧಾರ ಕೈಗೊಂಡಿದೆ.
Next Story





