ಆರ್ಥಿಕ ಬೆಳವಣಿಗೆಯನ್ನು ಅಳೆಯುವಲ್ಲಿ ಸಿನ್ಹಾ ವಿಫಲ: ಮುಖ್ತಾರ್ ಅಬ್ಬಾಸ್ ನಕ್ವಿ

ಹೊಸದಿಲ್ಲಿ,ಸೆ. 30: ಭಾರತ ಕಠಿಣ ಆರ್ಥಿಕ ಪರಿಸ್ಥಿಯನ್ನು ಎದುರಿಸುತ್ತಿದೆ ಮತ್ತು ಬೆಳವಣಿಗೆ ದರ ಕುಸಿದಿದೆ ಎಂದಿರುವ ಬಿಜೆಪಿ ನಾಯಕ ಯಶ್ ವಂತ್ ಸಿನ್ಹಾರನ್ನು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಕ್ವಿ ಟೀಕಿಸಿದ್ದಾರೆ. ಯಶ್ ವಂತ್ ಸಿನ್ಹಾರಿಗೆ ಆರ್ಥಿಕ ಕ್ಷೇತ್ರದ ಕುರಿತು ಹಲವು ವರ್ಷಗಳ ಅನುಭವವಿದ್ದೂ ಈಬಾರಿ ಅವರಿಗೆ ಆರ್ಥಿಕ ಬೆಳವಣಿಗೆಯನ್ನು ಗುರುತಿಸಲುಸಾಧ್ಯವಾಗಿಲ್ಲ ಎಂದು ನಕ್ವಿ ಹೇಳಿದರು. ಖಾಸಗಿ ಚಾನೆಲ್‍ಗಳಿಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡುತ್ತಿದ್ದರು.
ಸರಕು ಸೇವಾ ತೆರಿಗೆ ವಿಧಿಸಿದಬಳಿಕ ವಸ್ತುಗಳ ಬೆಲೆಯಿಳಿಕೆಯಾಗಿದೆ. ಸಿನ್ಹಾ ಅನುಭವಿ ವ್ಯಕ್ತಿಯಾಗಿದ್ದಾರೆ. ಆದರೆ ಈಬಾರಿ ಆರ್ಥಿಕ ಬೆಳವಣಿಗೆಯನ್ನು ಅಳೆಯುವಲ್ಲಿ ವಿಫಲರಾಗಿದ್ದಾರೆ. ಇಲ್ಲಿ ಹಳೆ ಭಾರತ ಮತ್ತು ಹೊಸ ಭಾರತ ನಡುವೆ ಕಲಹ ನಡೆಯುತ್ತಿದೆ. ಭಾರತ ಬಹಳ ಧನಾತ್ಮಕವಾಗಿ ಮುಂದೆ ಸಾಗುತ್ತಿದೆ ಎಂದು ಅವರು ಹೇಳಿದರು.
ನೋಟು ಅಮಾನ್ಯ ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಹಾನಿಯುಂಟು ಮಾಡಿದೆ ಮತ್ತು ಜಿಡಿಪಿ ಕಡಿಮೆಯಾಗಿದೆ ಎಂದು ಮಾಜಿ ಹಣಕಾಸು ಸಚಿವರೂ ಆಗಿರುವ ಯಶ್ ವಂತ್ ಸಿನ್ಹಾ ಕೇಂದ್ರ ಸರಕಾರವನ್ನು ಟೀಕಿಸಿದ್ದರು.





