ಕೊಳ್ಳೇಗಾಲ : ಬಿಜೆಪಿ ಕಾರ್ಯಕರ್ತರಿಂದ ಯಡಿಯೂರಪ್ಪರಿಗೆ ಅಭಿನಂದನೆ

ಕೊಳ್ಳೇಗಾಲ,ಸೆ.30: ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆತ್ಮೀಯವಾಗಿ ಅಭಿನಂದಿಸಿದರು.
ತಾಲ್ಲೂಕಿನ ಮಧ್ಯರಂಗನಾಥ ದೇವಾಲಯದಲ್ಲಿ ಪೂಜೆ ಮುಗಿಸಿ ಶನಿವಾರ ಬೆಳಿಗ್ಗೆ ತಮಿಳುನಾಡಿನ ಮದ್ಯರಂಗನಾಥ ದೇವಾಲಯಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ಕೊಳ್ಳೇಗಾಲ ಪಟ್ಟಣದ ಬಸವೇಶ್ವರ ಹೋಟೆಲ್‍ನಲ್ಲಿ ಹೋಟೆಲ್‍ನಲ್ಲಿ ಉಪಹಾರ ಸೇವಿಸಿ ನಂತರ ಚಾಮರಾಜನಗರ ಮಾರ್ಗವಾಗಿ ತಮಿಳುನಾಡಿಗೆ ತೆರಳಿದರು.
ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಬಿಎಸ್‍ವೈ ಅವರ ಕುಟುಂಬ ಸದಸ್ಯರು, ಹಿತೈಷಿಗಳು ಅವರ ಜತೆಯಲ್ಲಿದ್ದರು. ಇದೇ ವೇಳೆ ಪಟ್ಟಣದ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸುರೇಶ್, ಹಾಗೂ ಜಿ.ಪಿ ಶಿವಕುಮಾರ್ ಹಾಗೂ ಕಾರ್ಯಕರ್ತರು ಬಿಎಸ್‍ವೈ ಅವರ ಜತೆ ಫೋಟೋ ತೆಗೆಸಿಕೊಂಡು ಸಂತಸಪಟ್ಟರು.
Next Story





